“ಎಲೈಟ್ ಸ್ಟಾರ್ ಈವೆಂಟ್ಸ್” ವತಿಯಿಂದ ಅದ್ದೂರಿ ‘ಫ್ಯಾಷನ್ ಶೋ’
ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಕರೋನಾ ಮಹಾಮಾರಿಯ ಒತ್ತಡದಲ್ಲೂ ಸಾಕಷ್ಟು ಸುರಕ್ಷತಾ ಕ್ರಮಗಳೊಂದಿಗೆ ಎಲೈಟ್ ಸ್ಟಾರ್ ಈವೆಂಟ್ಸ್ ವತಿಯಿಂದ ಅದ್ದೂರಿ ಫ್ಯಾಷನ್ ಶೋ ಆಯೋಜಿಸಲಾಗಿತ್ತು ಎಲೈಟ್ ಸ್ಟಾರ್ ಈವೆಂಟ್ಸ್ ನ ಗ್ರ್ಯಾಂಡ್ ಫಿನಾಲೆಗಾಗಿ ಕರ್ನಾಟಕ ರಾಜ್ಯಾದ್ಯಂತ 45 ಮಾಡೆಲ್ ಗಳನ್ನೂ ಆಡಿಷನ್ ನಡೆಸಿ ಆಯ್ಕೆ ಮಾಡಲಾಗಿತ್ತು.
ಈ ಕಾರ್ಯಕ್ರಮಕ್ಕೆ ಬ್ರಾಂಡ್ ಅಂಬಾಸಿಡರ್ ಗಳಾಗಿ ನಟಿ, ರೂಪದರ್ಶಿ ಶುಭ ರಕ್ಷಾ ಹಾಗೂ ಪ್ರಜ್ವಲ್ ರವಿ ಜೊತೆಗೆ ಕಿಡ್ ಅಂಬಾಸಿಡರ್ ಗಳಾಗಿ ಸೃಷ್ಥಿ ಮತ್ತು ಕಲ್ಪಿತ್ ಕುಮಾರ್ ಇಲ್ಲಿ ಪ್ರಮುಖ ಆಕರ್ಷಣೆಯಾಗಿದ್ದರು.
ಈ ಸಾಲಿನ ಎಲೈಟ್ ಸ್ಟಾರ್ ಈವೆಂಟ್ಸ್ ನ ಗ್ರ್ಯಾಂಡ್ ಫಿನಾಲೆ ವಿಜೇತರು..!!!
ಈ ಸಾಲಿನ ಎಲೈಟ್ ಸ್ಟಾರ್ ಲಿಟಲ್ ಪ್ರಿನ್ಸ್ ಕರ್ನಾಟಕ 2021 ಯಾಗಿ ನಿಹಾರ್ ಪಿ ಗೌಡ ಹಾಗೂ ಲಿಟಲ್ ಪ್ರಿನ್ಸೆಸ್ ಕರ್ನಾಟಕ 2021 ಯಾಗಿ ಮೋನಿಷ್ ಪಿ ವಿಜೇತರಾಗಿದ್ದಾರೆ. ಎಲೈಟ್ ಸ್ಟಾರ್ ಟೀನ್ ಕಿಂಗ್ ಕರ್ನಾಟಕ 2021 ವಿನ್ನರ್ ಆಗಿ ಅಫ್ರೀದ್ ಮತ್ತು ಎಲೈಟ್ ಸ್ಟಾರ್ ಟೀನ್ ಕ್ವೀನ್ ವಿನ್ನರ್ ಆಗಿ ಅಮೃತ ವಿಜೇತರಾಗಿದ್ದಾರೆ.
ರೂಪದರ್ಶಿ ಗುಣಲಕ್ಮಿ ಅವರು ಎಲೈಟ್ ಸ್ಟಾರ್ ಈವೆಂಟ್ಸ್ ಸಂಸ್ಥೆಯ ಸ್ಥಾಪಕರು…!!
ಮಾಡಲಿಂಗ್ ಕ್ಷೇತ್ರದಲ್ಲಿ 5ವರ್ಷಗಳ ಅನುಭವವಿರುವ ರೂಪದರ್ಶಿ ಗುಣಲಕ್ಮಿ ಅವರು ಎಲೈಟ್ ಸ್ಟಾರ್ ಈವೆಂಟ್ಸ್ ಸಂಸ್ಥೆಯ ಸ್ಥಾಪಕರು. ಅವರ ಜೊತೆಗೆ ರೇಖಾ ಹಾಗೂ ಸವಿತಾ ಕೈ ಜೋಡಿಸಿದ್ದಾರೆ. ಈ ಸಂಸ್ಥೆಯ ಮೂಲಕ ವರ್ಷಕ್ಕೆ ಮೂರು ಕಾರ್ಯಕ್ರಮ ಗಳನ್ನೂ ಆಯೋಜಿಸುವ ಯೋಜನೆ ಹೊಂದಿದ್ದಾರೆ. ಈ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ನಟ-ನಟಿಯರಾದ ಕಾರುಣ್ಯರಾಮ್, ಅಧ್ವಿತಿ ಶೆಟ್ಟಿ ಶಶಾಂಕ್ ರಾಜ್ , ಬಾಲನಟಿ ಬೇಬಿಶ್ರೀ , ಅಸ್ ಲಮ್ ಸೂಪರ್ ಸ್ಟಾರ್, ಸಾಮಾಜಿಕ ಕಾರ್ಯಕರ್ತ ಮಹೇಂದ್ರ ಮನ್ನೋತ್ ಮತ್ತಿತರು ಆಗಮಿಸಿ ಶುಭ ಹಾರೈಸಿದರು.
ರೂಪದರ್ಶಿ ಗುಣಲಕ್ಮಿ ಅವರು ಎಲೈಟ್ ಸ್ಟಾರ್ ಈವೆಂಟ್ಸ್ ಸಂಸ್ಥೆಯ ಸ್ಥಾಪಕರು
ಗ್ರ್ಯಾಂಡ್ ಫಿನಾಲೆಗಾಗಿ ಸೆಲೆಬ್ರಿಟಿ ಜ್ಯೂರಿಗಳು….!!!!
ಗ್ರ್ಯಾಂಡ್ ಫಿನಾಲೆಗಾಗಿ ಸೆಲೆಬ್ರಿಟಿ ಜ್ಯೂರಿಗಳಾಗಿ ಲಕ್ಷ್ಮಿ ಕೃಷ್ಣ , ಮನೀಷ್ ದೇವ್ ಮತ್ತು ಪದ್ಮ ಪ್ರಿಯಾ ತಮ್ಮ ಕಾರ್ಯ ನಿರ್ವಹಿಸಿದರು. ಈ ಕಾರ್ಯಕ್ರಮಕ್ಕೆ ಬ್ರಾಂಡ್ ಅಂಬಾಸಿಡರ್ ಗಳಾಗಿ ನಟಿ, ರೂಪದರ್ಶಿ ಶುಭ ರಕ್ಷಾ ಹಾಗೂ ಪ್ರಜ್ವಲ್ ರವಿ ಜೊತೆಗೆ ಕಿಡ್ ಅಂಬಾಸಿಡರ್ ಗಳಾಗಿ ಸೃಷ್ಥಿ ಮತ್ತು ಕಲ್ಪಿತ್ ಕುಮಾರ್ ಇಲ್ಲಿ ಪ್ರಮುಖ ಆಕರ್ಷಣೆಯಾಗಿದ್ದರು. ಇನ್ನು ಎಲೈಟ್ ಸ್ಟಾರ್ ಸಂಸ್ಥೆ ನಡೆಸಿದ ಈ ಕಾರ್ಯಕ್ರಮ ಕೇವಲ ಮನರಂಜನೆಗೆ ಸೀಮಿತವಾಗದೆ ಮಾನವೀಯತೆಯ ಹಸ್ತವನ್ನೂ ಕೂಡ ಚಾಚಿತ್ತು.