Namma Superstars Education,Magazine,Social & Cultural Activities “ಐ ಐ ಸಿ ಸಿ ಬಿ” ಸಂಸ್ಥೆಯ ಕಾರ್ಯಗಳಿಗೆ ಮೆಚ್ಚಿದ ಉದ್ಯಮಿಗಳು

“ಐ ಐ ಸಿ ಸಿ ಬಿ” ಸಂಸ್ಥೆಯ ಕಾರ್ಯಗಳಿಗೆ ಮೆಚ್ಚಿದ ಉದ್ಯಮಿಗಳು



Share

ಎಲ್ಲಾ ಕ್ಷೇತ್ರದ ಅನುಭವಿ ಹಾಗೂ ನೂತನ  ಉದ್ಯಮಿಗಳ ಜೊತೆ ಒಡನಾಟ,  ನಾನಾ ರೀತಿಯ ಉದ್ಯೋಗಾವಕಾಶಗಳನ್ನು ಭವಿಷ್ಯದ ಹಿತ ದೃಷ್ಟಿಯಿಂದ ಸದ್ಬಳಕೆ ಮಾಡಲು ಮಾಹಿತಿ ತಂತ್ರಜ್ಞಾನಗಳ ಬಗ್ಗೆ ಸಹಕಾರ, ಪ್ರೋತ್ಸಾಹ ನೀಡುವ ಉದ್ದೇಶ ಹೊಂದಿರುವ ಐ ಐ ಸಿ ಸಿ ಬಿ ಯ ಕೆಲಸ ಕಾರ್ಯಗಳಿಗೆ ಸಾಕಷ್ಟು ಉದ್ಯಮಿಗಳಿಂದ ಪ್ರಶಂಸೆ ದೊರಕಿತು.

ಈ ಸಂಸ್ಥೆಯ ಟ್ರಸ್ಟಿ ಸಯ್ಯದ್ ನಿಜಾಮುದ್ದೀನ್ ಮಾತನಾಡಿ , ” ಐ ಐ ಸಿ ಸಿ ಬಿ ಸಂಸ್ಥೆ, ಸಾಮಾಜಿಕ ಕಾಳಜಿ ಹೊಂದಿದ್ದು, ಎಲ್ಲಾ ವರ್ಗದ ಜನರಿಗೆ ಉದ್ಯೋಗ ಮಾಹಿತಿ,  ಬೆಳವಣಿಗೆಗೆ ಸಹಕಾರ ಹಾಗೂ ಭಾರತೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಯೋಚನೆಯನ್ನು ಹೊಂದಿದೆ. ಎಂಪೈರ್ ಹೋಟೆಲ್ ಹಾಗೂ ಇನ್ನಿತರ ಸಂಸ್ಥೆಗಳ ಸಹಕಾರವನ್ನು  ತುಂಬು‌ ಹೃದಯದಿಂದ ಶ್ಲಾಘಿಸಿದರು.”

ಜೊತೆಗೆ ಹ್ಯಾಂಡ್ ರೈಟಿಂಗ್ ಎಕ್ಸ್ ಪರ್ಟ್ ಯಾಗಿ ಖ್ಯಾತಿ ಹೊಂದಿರುವ ರಫಿ ಸರ್ ಈ ಕಾರ್ಯಕ್ರಮದ ನಿರೂಪಣೆಯನ್ನು ಅಚ್ಚು ಕಟ್ಟಾಗಿ ನಿರ್ವಹಿಸಿ ಮೆಚ್ಚುಗೆಗೆ ಪಾತ್ರರಾದರು. ಈ ಕಾರ್ಯಕ್ರಮಕ್ಕೆ ಅಮಿರ್ ಶರೀಫ್, ಅಫ್ಸರ್ ಖಾದ್ರಿ, ಫಾತಿಮಾ ಅಜ್ಮಲ್, ಸಿರಾಜ್ ಪಾಷಾ, ಅಜೀಜ್ ಅಜೀಮ್ ಇನ್ನಿತರರು, ಜೊತೆಗೆ  ಸ್ಟಾರ್ ಕನ್ನಡ ತಂಡ ಕೂಡ ಸಾಥ್ ನೀಡಿತು.

Leave a Comment