ಸಂಕಷ್ಟದಲ್ಲಿರುವ ವಕೀಲರಿಗೆ ಸಹಾಯಹಸ್ತ ಚಾಚಿದ “ಹೆಚ್. ಆರ್. ದುರ್ಗಾ ಪ್ರಸಾದ್”
ಕರೋನಾದಿಂದ ಇಡೀ ವಿಶ್ವವೇ ತತ್ತರಿಸಿ ಹೋಗಿದೆ. ಎರಡನೇಯ ಅಲೆಯಲ್ಲಿಯೂ ಸಹ ಸಾಕಷ್ಟು ಜನರಿಗೆ ಕೆಲಸವಿಲ್ಲದೆ, ಊಟವಿಲ್ಲದೆ, ಪರದಾಡುವಂತಾಗಿದೆ. ರಾಜ್ಯದ ಹಲವಾರು ವಕೀಲರು ಕೂಡ ಸಂಕಷ್ಟಕ್ಕೆಸಿಲುಕಿದ್ದಾರೆ . ಕೋವಿಡ್ ನಿಂದಾಗಿ ಸಂಕಷ್ಟದಲ್ಲಿರುವ ವಕೀಲರಿಗೆ ಹೆಚ್. ಆರ್. ದುರ್ಗಾ ಪ್ರಸಾದ್ ಮತ್ತು ಸಮಾನ ಮನಸ್ಕರ ತಂಡದಿಂದ ದಿನಸಿ ಕಿಟ್ ವಿತರಿಸುವ ಮೂಲಕ ನೆರವು ನೀಡಲಾಯಿತು.
ಎಲ್ಲಾ ವಕೀಲರು ಸ್ಥಿತಿವಂತರಾಗಿರುವುದಿಲ್ಲ …..! ಲಾಕ್ ಡೌನ್ ನಿಂದ ಎಲ್ಲರೂ ಸಮಸ್ಯೆಗೆ ಸಿಲುಕಿದ್ದಾರೆ.
ಸುಮಾರು 25ವರ್ಷದಿಂದ ಹೈಕೋರ್ಟ್ , ಸಿವಿಲ್ ಕೋರ್ಟ್ , ಮ್ಯಾಜಿಸ್ಟ್ರೇಟ್ ಕೋರ್ಟ್ ಗಳಲ್ಲಿ ವೃತ್ತಿಯನ್ನೂ ಮಾಡಿಕೊಂಡಿರುವ ವಕೀಲರಾದ ಹೆಚ್. ಆರ್. ದುರ್ಗಾ ಪ್ರಸಾದ್ ಮಾತನಾಡಿ, ಎಲ್ಲಾ ವಕೀಲರು ಸ್ಥಿತಿವಂತರಾಗಿರುವುದಿಲ್ಲ. ಲಾಕ್ ಡೌನ್ ನಿಂದ ಎಲ್ಲರೂ ಸಮಸ್ಯೆಗೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಸಂಕಷ್ಟದಲ್ಲಿರುವವರ ಸಹಾಯಕ್ಕೆ ಧಾವಿಸಿರುವುದು ಅತ್ಯಂತ ಮಾನವೀಯ ಕಳಕಳಿಯ ವಿಚಾರವೆಂದು ತಿಳಿಸಿದರು.
ಸುಮಾರು ಹದಿನೈದರಿಂದ ಇಪ್ಪತ್ತು ಲಕ್ಷ ರೂಪಾಯಿಗಳನ್ನೂ ಸಂಗ್ರಹಿಸಿ, ರಾಜ್ಯದ ಸುಮಾರು 500ಕ್ಕಿಂತ ಹೆಚ್ಚು ವಕೀಲರಿಗೆ ನೆರವಾಗಿದ್ದಾರೆ.
ಮೊದಲನೇಯ ಲಾಕ್ ಡೌನ್ ನಲ್ಲಿ ಸುಮಾರು ಹದಿನೈದರಿಂದ ಇಪ್ಪತ್ತು ಲಕ್ಷ ರೂಪಾಯಿಗಳನ್ನೂ ಸಂಗ್ರಹಿಸಿ ರಾಜ್ಯದ ಸುಮಾರು 500ಕ್ಕಿಂತ ಹೆಚ್ಚು ವಕೀಲರಿಗೆ ಹಿರಿಯ ವಕೀಲರು ಹಾಗೂ ಮಾಜಿ ಅಡ್ವೋಕೇಟ್ ಜನರಲ್ ಶ್ರೀ ಅಶೋಕ ಹಾರನಹಳ್ಳಿ , ಉದಯ ಹೊಳ್ಳ ,ಜೊತೆಗೆ ಹೈಕೋರ್ಟ್ ನ ವಕೀಲರಾದ ಶ್ರೀ ಕೆ.ರಾಮ್ ಭಟ್, ಎಸ್.ವಿ. ಭಟ್, ವಿಶ್ವನಾಥ್ ಹೆಗಡೆ, ಶ್ರೀನಿವಾಸ್ ಭಟ್, ವಿಷ್ಣು ಭಟ್, ಮುರುಳಿ, ಅನು ಚಂಗಪ್ಪ , ಸಮಾನ ಮನಸ್ಕರ ತಂಡದಿಂದ ಹಾಗೂ ಸಹಕಾರದಿಂದ ಈ ಕೆಲಸ ಮಾಡಿದ್ದೇವೆ ಎಂದರು. ಕೆಲ ವಕೀಲರಿಗೆ ಮೂರು ಸಾವಿರ ಮತ್ತು ಐದು ಸಾವಿರ ಹಣವನ್ನು ನೀಡಿದ್ದೇವೆ.
ಸಮಾನ ಮನಸ್ಕರ ತಂಡದ ವತಿಯಿಂದ 250 ಜನ ವಕೀಲರಿಗೆ ಎರಡೂ ತಿಂಗಳಿಗೆ ಬೇಕಾಗೂವಷ್ಟು ದಿನಸಿ ಕಿಟ್ ವಿತರಣೆ.
ಬೆಂಗಳೂರು ನಗರದ ಬಸವನಗುಡಿ , ಕೆ ಆರ್ ಪುರಂ , ಮೆಯೋ ಹಾಲ್, ಏರಿಯಾಗಳಲ್ಲಿ ಹೆಚ್. ಆರ್. ದುರ್ಗಾ ಪ್ರಸಾದ್ ಜೊತೆಗೆ ಶ್ರೀ ಭಕ್ತವತ್ಸಲ, ಮುನಿಯಪ್ಪ, ಮಿಶ್ರಾ, ಸುಭಾಷಿಣಿ, ಭಾರತಿ, ರಘು ರವರ ಸಮಾನ ಮನಸ್ಕರ ತಂಡದ ವತಿಯಿಂದ 250 ಜನ ವಕೀಲರಿಗೆ ಎರಡೂ ತಿಂಗಳಿಗೆ ಬೇಕಾಗೂವಷ್ಟು ಅಕ್ಕಿ, ಗೋಧಿ, ರವೆ, ಸಕ್ಕರೆ, ಅಡುಗೆ ಎಣ್ಣೆ ಸೇರಿದಂತೆ ದಿನ ನಿತ್ಯದ ಅಗತ್ಯ ವಸ್ತುಗಳನ್ನು ಒಳಗೊಂಡ ದಿನಸಿ ಕಿಟ್ ವಿತರಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಹಿರಿಯ ವಕೀಲರಾದ ಎಸ್ .ಪಿ. ಶಂಕರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ” ಹೆಚ್. ಆರ್. ದುರ್ಗಾ ಪ್ರಸಾದ್ ಅವರು ಸಾಕಷ್ಟು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಅವರು ವಕೀಲ ಸಮುದಾಯದ ಬಗ್ಗೆ ವಿಶೇಷ ಕಾಳಜಿ ಪ್ರೀತಿ ಹೊಂದಿದ್ದಾರೆ . ವಕೀಲರಿಗಾಗಿಯೇ ಸಾಕಷ್ಟು ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಕಾನೂನು ವೃತ್ತಿಯಲ್ಲಿ ತೊಡಗಿಸಿಕೊಳ್ಳಲು ಸಹಾ ಅವರು ಸಾಕಷ್ಟು ಜನರಿಗೆ ನೆರವಾಗಿದ್ದಾರೆ. ನಾನು ಈ ಹಿಂದೆಯೂ ಸಹಾ ಅವರ ಹಲವು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ನಿಜಕ್ಕೂ ಅವರ ಹಾಗೂ ಅವರ ತಂಡದ ಕಾರ್ಯ ಶ್ಲಾಘನೀಯ” ಎಂದು ಪ್ರಶಂಸೆ ವ್ಯಕ್ತಪಡಿಸಿದರು.