ಇವೆಂಟ್ಸ್ ಸ್ಟೂಡಿಯೋ ಅರ್ಪಿಸುವ ”ಮಿನಿ ಮಾಡೆಲ್‌” ಸೀಸನ್ 1

Share

ಯುವಿಕಾ ಎಂ ಅವರು ‘ಫೇಸ್ ಆಫ್ ಮಿನಿ ಮಾಡೆಲ್’

ಬೆಂಗಳೂರಿನ ಇವೆಂಟ್ಸ್ ಸ್ಟುಡಿಯೋ ಆಯೋಜನೆಯ ಮಿನಿ ಮಾಡೆಲ್ ಸ್ಪರ್ಧೆಯಲ್ಲಿ ಯುವಿಕಾ ಎಂ ಅವರು ‘ಫೇಸ್ ಆಫ್ ಮಿನಿ ಮಾಡೆಲ್’ ಆಗಿದ್ದರು. ಸಂಜನಾ ಹಾಗೂ ಮಂಜುನಾಥ್ ಒಡೆತನದ ಇವೆಂಟ್ಸ್ ಸ್ಟುಡಿಯೋ ವತಿಯಿಂದ ಆಯೋಜನೆ ಮಾಡಲಾದ ಮಿನಿ ಮಾಡೆಲ್ – 2021 ಸೀಸನ್ 1 ಕಾರ್ಯಕ್ರಮದಲ್ಲಿ ರಾಜ್ಯಾದ್ಯಂತ 120 ಕ್ಕೂ ಹೆಚ್ಚು ಮಕ್ಕಳು ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದರು. ಆಡಿಷನ್ ಮೂಲಕ ಅಂತಿಮವಾಗಿ 30 ಮಕ್ಕಳನ್ನು ಆಗಸ್ಟ್ 8ರಂದು ನಡೆದ ಮಿನಿ ಮಾಡೆಲ್ ಸ್ಪರ್ಧೆಗೆ ಆಯ್ಕೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟಿ ಸೋನಿಯಾ ಗೌಡ

ಸ್ಪರ್ಧೆಯಲ್ಲಿ ರೆಯಸ್ ರಾಜ್, ಘಾನವಿ ಲೋಕೇಶ್, ಪ್ರಾರ್ಥನಾ, ರಾಫೆಲ್ ಫಿಲಿಪ್, ಲೇಖನ್ ಜೆ., ರೋಹನ್ ಮೈತ್ರೇಯ, ಪ್ರಜ್ವಲ್ ಎಚ್ ಗೌಡ, ಯುವನ್ ಸೂರ್ಯ, ಸ್ತಶಾ ಸಿಂಗ್ ಅವರು ವಿಜೇತರಾಗಿ ಹೊರಹೊಮ್ಮಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟಿ ಸೋನಿಯಾ ಗೌಡ ಮಾತನಾಡಿ, ” ಈ ರೀತಿಯ ಕಾರ್ಯಕ್ರಮಗಳು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಇವೆಂಟ್ಸ್ ಸ್ಟುಡಿಯೋದ ಈ ಕಾರ್ಯಕ್ರಮ ಶ್ಲಾಘನೀಯ” ಎಂದು ಹೇಳಿದರು.

ಮಿನಿ ಮಾಡೆಲ್ – ಸೀಸನ್ 1 ಕಾರ್ಯಕ್ರಮದ ಆಯೋಜಕಿ ಸಂಜನಾ

ಕಾರ್ಯಕ್ರಮದ ಆಯೋಜಕಿ ಸಂಜನಾ ಮಾತನಾಡಿ, ” ಮಿನಿ ಮಾಡೆಲ್ – ಸೀಸನ್ 1 ಕಾರ್ಯಕ್ರಮದಲ್ಲಿ ರಾಜ್ಯದ 120ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿರುವುದು ಖುಷಿ ತಂದಿದೆ. ಮಿನಿ ಮಾಡೆಲ್ – ಸೀಸನ್ 2 ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ಶೀಘ್ರವೇ ಆಯೋಜನೆ ಮಾಡಲಾಗುವುದು. ಇವೆಂಟ್ಸ್ ಸ್ಟುಡಿಯೋ ಪೇಜ್ ಫಾಲೋ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ಪಡೆಯಬಹುದು” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಫ್ಯಾಷನ್ ಲೋಕದ ಗಣ್ಯರು ಭಾಗಿ

ಮಿನಿ‌ ಮಾಡೆಲ್ ವಿನ್ ಆಗಿರುವಂತಹ ಮತ್ತು ಭಾಗಿಯಾಗಿರುವಂತಹ ಎಲ್ಲ ಮಕ್ಕಳಿಗೂ ಕೆಲವೊಂದು ಅವಕಾಶಗಳು ಒದಗಿಬರುತ್ತದೆ. ಕಾರ್ಯಕ್ರಮದಲ್ಲಿ ಮಕ್ಕಳ ಜೊತೆಗೆ ಪೋಷಕರು, ಫ್ಯಾಷನ್ ಲೋಕದ ಗಣ್ಯರು ಭಾಗಿ ಆಗಿದ್ದರು.

Leave a Comment