ಆಸ್ಕರ್ ಅಂಗಳದಲ್ಲಿ “ಕಾಂತಾರ” & “ವಿಕ್ರಾಂತ್ ರೋಣ”

Share

ಕಳೆದ ೨೦೨೨ರಲ್ಲಿ ‘ಕಾಂತಾರ’ ‘ವಿಕ್ರಾಂತ್ ರೋಣ’ ಚಿತ್ರಗಳ ಮೂಲಕ ದೇಶದ ಇತರ ಭಾಷೆ ಪ್ರೇಕ್ಷಕರು, ಚಿತ್ರರಂಗದವರು ಕನ್ನಡದತ್ತ ತಿರುಗಿ ನೋಡಿದರು. ಈಗ ಕನ್ನಡದಕಾಂತಾರ’ ವಿಕ್ರಾಂತ್ ರೋಣ’ ಸಿನಿಮಾಗಳು ಆಸ್ಕರ್ ಅಂಗಳಕ್ಕೆ ಕಾಲಿಟ್ಟಿವೆ. ಇಲ್ಲಿಯವರೆಗೆ ಆಸ್ಕರ್‌ಗೆ ಚುನಾಯಿತರಾಗುತ್ತಿದ್ದ ಚಿತ್ರಗಳು ಬಾಲಿವುಡ್ ಚಿತ್ರಗಳೇ ಹೆಚ್ಚಾಗಿ ಆಗುತ್ತಿದ್ದವು. ಇದೇ ಮೊದಲ ಬಾರಿಗೆ ದಕ್ಷಿಣ ಭಾರತದಿಂದ ಹೆಚ್ಚು ಚಿತ್ರಗಳು ಆಸ್ಕರ್ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ.

ರಿಷಬ್ ಶೆಟ್ಟಿ ನಿರ್ದೇಶನ ಮಾಡಿ ನಾಯಕರಾಗಿ ನಟಿಸಿದ್ದಕಾಂತಾರ’ ಮಾಡಿದ ಮೋಡಿ ಬಹಳ ದೊಡ್ಡದು. ಕೇವಲ ೧೬ ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಸಿನಿಮಾದ ಗಳಿಕೆ ೪೦೦ ಕೋಟಿ ರೂಪಾಯಿಗೂ ಅಧಿಕ ಹಣ. ಈ ಚಿತ್ರವನ್ನು ಕನ್ನಡದಲ್ಲಿ ನಿರ್ಮಾಣ ಮಾಡಿದ್ದು, ಇದರ ಪ್ರಭಾವ ನೋಡಿ ಎಲ್ಲ ಭಾಷೆಗಳಲ್ಲೂ ಡಬ್ ಮಾಡಲಾಯಿತು. ಈಗ ಈ ಚಿತ್ರವು ಆಸ್ಕರ್ ಅಂಗಳದಲ್ಲಿದೆ. ಆಸ್ಕರ್ ಪಟ್ಟಿಯಲ್ಲಿ ಕಾಂತಾರ’ ಇರುವ ಬಗ್ಗೆ ಮಂಗಳವಾರ ತಿಳಿಯಿತು. ತನಗೂ ಮತ್ತು ತನ್ನ ತಂಡ ಇಬ್ಬರಿಗೂ ಖುಷಿಯ ವಿಚಾರವಿದು. ನಮ್ಮ ಸಿನಿಮಾ ಬೆಸ್ಟ್ ಸಿನಿಮಾ ಮತ್ತು ಬೆಸ್ಟ್ ಆಕ್ಟರ್ ಪಟ್ಟಿಯಲ್ಲಿದೆ. ಈ ಸಂದರ್ಭದಲ್ಲಿ ತಾನು ನಿರ್ಮಾಣ ಸಂಸ್ಥೆಯನ್ನು ನೆನಪಿಸಿಕೊಳ್ಳುತ್ತೇನೆ. ಅವರ ಸಹಕಾರವಿಲ್ಲದೇ ಇದ್ದರೆ ನಾವು ಇಲ್ಲಿಯವರೆಗೂ ಬರಲು ಸಾಧ್ಯವಾಗುತ್ತಿರಲಿಲ್ಲ ಎಂದು ರಿಷಬ್ ಶೆಟ್ಟಿ ಹೇಳುತ್ತಾರೆ.

ಅನೂಪ್ ಭಂಡಾರಿ ನಿರ್ದೇಶಿಸಿದ್ದವಿಕ್ರಾಂತ್ ರೋಣ’ ಆಸ್ಕರ್ ಅಂಗಳಕ್ಕೆ ಹೋಗಿದೆ. ಈ ಹಿಂದೆ ೨೦೧೬ರಲ್ಲಿ ಅವರ ರಂಗಿತರAಗ’ ಸಿನಿಮಾ ಆಸ್ಕರ್‌ವರೆಗೂ ಹೋಗಿತ್ತು.ಆಸ್ಕರ್ ನಂತಹ ದೊಡ್ಡ ಪ್ರಶಸ್ತಿಗಾಗಿ ಸಾವಿರಾರು ಚಿತ್ರಗಳು ಅರ್ಜಿ ಸಲ್ಲಿಸಿರುತ್ತವೆ. ಅದರಲ್ಲಿ ಶಾರ್ಟ್ಲಿಸ್ಟ್ ಆಗುವುದು ಸಹ ಒಂದು ದೊಡ್ಡ ಗೌರವ ಪಡೆದಂತೆ. ನಾವು ಮಾಡಿದ ಕೆಲಸ ಮತ್ತು ಶ್ರಮವನ್ನು ಗುರುತಿಸಿದಾಗ ಖುಷಿಯಾಗುತ್ತದೆ. ಆಸ್ಕರ್‌ನ ೩೦೧ ಚಿತ್ರಗಳ ಪಟ್ಟಿಯಲ್ಲಿ `ವಿಕ್ರಾಂತ್ ರೋಣ’ ಇರುವುದು ನಮಗೆ ಹೆಚ್ಚಿನ ಖುಷಿ ನೀಡಿದೆ ಎಂದು ಅನೂಪ್ ಭಂಡಾರಿ ಹೇಳಿದ್ದಾರೆ.

Leave a Comment