ಬಡ ಮಕ್ಕಳಿಗೆ ಉಚಿತವಾಗಿ ನೃತ್ಯ ತರಬೇತಿ ಹಾಗೂ ಗ್ರಾಮಾಂತರ ಪ್ರದೇಶದ ಹಳ್ಳಿಗಳಿಗೆ ಹೋಗಿ ನೃತ್ಯ ಪ್ರದರ್ಶನ ಮೂಲಕ ಜನರನ್ನು ಜಾಗೃತಿಗೊಳಿಸುತ್ತಿ ದ್ದಾರೆ, ಕಲ್ಪಾಶ್ರೀ ಸಂಸ್ಥೆ ಮುಖ್ಯಸ್ಥ, “ಸುಜೇಂದ್ರ ಬಾಬು”

Share

ಸುಜೇಂದ್ರ ಬಾಬು, ತಾವು ಪಡೆದ ನಾಟ್ಯಶಾಸ್ತ್ರ ಜ್ಞಾನವನ್ನು ವಿದ್ಯಾರ್ಥಿಗಳಿಗೆ ತಿಳಿಯಪಡಿಸಬೇಕು ಎಂಬ ಸದುದ್ದೇಶದಿಂದ ಕಲ್ಪಾಶ್ರೀ ಸಂಸ್ಥೆ ಸ್ಥಾಪನೆ ಮಾಡಿದ್ದಾರೆ. ಅವರು ಒಬ್ಬ ಅದ್ಭುತ ನೃತ್ಯಗಾರ. ಮಾನವೀಯತೆ ಇರುವ ಕಲಾವಿದ. ಚನ್ನಪಟ್ಟಣದಲ್ಲಿ ಕಲ್ಪಾಶ್ರೀ ಸಂಸ್ಥೆಯನ್ನು ಮೂವತ್ತು ವರ್ಷಗಳ ಹಿಂದೆ ಆರಂಭಿಸಿ, ಬೆಂಗಳೂರು ಹೈದ್ರಾಬಾದ್‌ನಲ್ಲಿ ಸಬ್ ಬ್ರಾಂಚ್‌ಗಳು ಇವೆ. ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ನೃತ್ಯ, ಸಂಗೀತ ತರಬೇತಿ ಪಡೆದುಕೊಂಡಿದ್ದಾರೆ. ಕಲ್ಪಾಶ್ರೀ ಸಂಸ್ಥೆ ವತಿಯಿಂದ ಚನ್ನಪಟ್ಟಣದಲ್ಲಿ ಬಡ ಮಕ್ಕಳಿಗೆ ಉಚಿತವಾಗಿ ನೃತ್ಯ ತರಬೇತಿ ನೀಡುತ್ತಿದ್ದಾರೆ. ಗ್ರಾಮಾಂತರ ಪ್ರದೇಶದ ಹಳ್ಳಿಗಳಿಗೆ ಹೋಗಿ ನೃತ್ಯ ಪ್ರದರ್ಶನ ಮೂಲಕ ಜನರನ್ನು ಜಾಗೃತಿಗೊಳಿಸುತ್ತಿದ್ದಾರೆ. ಇದರ ಮೂಲಕ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೃತ್ಯ ತರಬೇತಿ ನೀಡಿದ್ದಾರೆ. ಭರತನಾಟ್ಯದ ಜೊತೆ ಆಧುನಿಕ ನೃತ್ಯ ಶೈಲಿಯನ್ನೂ ಹೇಳಿಕೊಡುತ್ತಿದ್ದಾರೆ. ಆತ್ಮವಿಶ್ವಾಸ ಹೆಚ್ಚಿಸಿ, ಸ್ವಂತ ಬದುಕು ಕಟ್ಟಿಕೊಳ್ಳಲು ನೆರವಾಗುತ್ತಿದ್ದಾರೆ.

ಅಕ್ಕ ಸಮ್ಮೇಳನ ಸೇರಿದಂತೆ ದೇಶ, ವಿದೇಶಗಳಲ್ಲಿ ತಮ್ಮ ತಂಡದಿಂದ ನೃತ್ಯ ಪ್ರದರ್ಶನ ನೀಡುವ ಮೂಲಕ ಖ್ಯಾತಿ ಪಡೆದಿದ್ದಾರೆ.

ಲಂಡನ್‌ನಲ್ಲಿ ಕಲ್ಪಾಶ್ರೀ ಇಂಟರ್ ನ್ಯಾಷನಲ್ ಡ್ಯಾನ್ಸ್ ಫೆಸ್ಟಿವಲ್ ನಡೆಯಿತು. ೩೮ ಜನ ಕಲಾವಿದರು ಪ್ರದರ್ಶನ ನೀಡಿದರು. ಯುಎಸ್, ಲಂಡನ್, ಶ್ರೀಲಂಕಾ, ಕೀನ್ಯಾ, ಕುವೈತ್, ದೋಹದಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ.

ಲಂಡನ್‌ನಲ್ಲಿ ಕಲ್ಪಾಶ್ರೀ ಇಂಟರ್ ನ್ಯಾಷನಲ್ ಡ್ಯಾನ್ಸ್ ಫೆಸ್ಟಿವಲ್ ನಡೆಯಿತು. ೩೮ ಜನ ಕಲಾವಿದರು ಪ್ರದರ್ಶನ ನೀಡಿದರು. ತುಂಬಾ ಒಳ್ಳೆ ರೆಸ್ಪಾನ್ಸ್ ಸಿಕ್ಕಿತು. ಅಮೆರಿಕದ ಅಕ್ಕ ಸಮ್ಮೇಳನದಲ್ ಕೂಡ ನಮ್ಮ ಕಲ್ಪಾಶ್ರೀ ಸಂಸ್ಥೆ ವತಿಯಿಂದ ನೃತ್ಯ ಪ್ರದರ್ಶನ ನೀಡಿದ್ದೇವೆ. ಅಕ್ಕ ಸಮ್ಮೇಳನ ಸೇರಿದಂತೆ ದೇಶ, ವಿದೇಶಗಳಲ್ಲಿ ತಮ್ಮ ತಂಡದಿಂದ ನೃತ್ಯ ಪ್ರದರ್ಶನ ನೀಡುವ ಮೂಲಕ ಖ್ಯಾತಿ ಪಡೆದಿದ್ದಾರೆ. ಹಲವಾರು ಪ್ರಶಸ್ತಿ ಪುರಸ್ಕಾರಗಳು ಇವರನ್ನು ಹುಡುಕಿಕೊಂಡು ಬಂದಿವೆ. ಇನ್ನು ಕಲ್ಪಾಶ್ರೀ ಸಂಸ್ಥೆ ಕೂಡ ತುಂಬಾ ಚೆನ್ನಾಗಿ ನಡೆಯುತ್ತಿದೆ. ಸಮಾಜದಲ್ಲೂ ಒಳ್ಳೆ ಹೆಸರಿದೆ. ವಿದ್ಯಾರ್ಥಿಗಳನ್ನು ತುಂಬಾ ಚೆನ್ನಾಗಿ ತರಬೇತುಗೊಳಿಸುತ್ತಿದ್ದಾರೆ.

Leave a Comment