“ಮನೆ ತಾರಸಿ ಮೇಲೆಯೇ ಸಾವಯವ ಕೃಷಿ ; ಶೋಭಾ ಆನಂದ ಅವರ ವಿನೂತನ ಪ್ರಯೋಗ”

ನಗರಕ್ಕೆ ಬಂದ ಮೇಲೆ ಹಳ್ಳಿ ಜೀವನ ಮಿಸ್ ಆಯ್ತು ಅನ್ನೋದು ನಗರವಾಸಿಗಳ ಸಾಮಾನ್ಯ ಮಾತು ಆದರೆ, ಸಿಟಿ ನಡುವಲ್ಲಿ ಇದ್ದುಕೊಂಡು ಹಳ್ಳಿ ಜೀವನ ಮಾಡಬಹುದು ಅಂದರೇ ನೀವು ನಂಬುತ್ತೀರಾ..? ನಂಬಲೇ ಬೇಕು. ಹೌದು ನಾಗಮಂಗಲ ತಾಲೂಕಿನ ಬೆಟ್ಟದಕೋಟೆ ಊರಿನವರಾದ ಶೋಭಾ ಆನಂದ ಅವರು ಬೆಂಗಳೂರು ನಗರದಲ್ಲಿ ಕೃಷಿ ಮಾಡಿ ಪ್ರಗತಿಪರ ಕೃಷಿಕರಾಗಿ ಹೊರ ಹೊಮ್ಮಿದ್ದಾರೆ. ಕಳೆದ ಒಂದೂವರೆ ವರ್ಷಗಳಿಂದ ಮನೆಯ ತಾರಸಿಯಲ್ಲಿ ಅಪ್ಪಟ ಸಾವಯವ ಕೃಷಿ ತೋಟ ಕಂಗೊಳಿಸುತ್ತಿದ್ದು, ನಗರದ ನಡುವಿನಲ್ಲಿದ್ದುಕೊಂಡು ಕೃಷಿ ಕ್ರಾಂತಿ ಮಾಡುತ್ತಿದ್ದಾರೆ. ಆಗಷ್ಟೇ

Read More

ಬಡ ಮಕ್ಕಳಿಗೆ ಉಚಿತವಾಗಿ ನೃತ್ಯ ತರಬೇತಿ ಹಾಗೂ ಗ್ರಾಮಾಂತರ ಪ್ರದೇಶದ ಹಳ್ಳಿಗಳಿಗೆ ಹೋಗಿ ನೃತ್ಯ ಪ್ರದರ್ಶನ ಮೂಲಕ ಜನರನ್ನು ಜಾಗೃತಿಗೊಳಿಸುತ್ತಿ ದ್ದಾರೆ, ಕಲ್ಪಾಶ್ರೀ ಸಂಸ್ಥೆ ಮುಖ್ಯಸ್ಥ, “ಸುಜೇಂದ್ರ ಬಾಬು”

ಸುಜೇಂದ್ರ ಬಾಬು, ತಾವು ಪಡೆದ ನಾಟ್ಯಶಾಸ್ತ್ರ ಜ್ಞಾನವನ್ನು ವಿದ್ಯಾರ್ಥಿಗಳಿಗೆ ತಿಳಿಯಪಡಿಸಬೇಕು ಎಂಬ ಸದುದ್ದೇಶದಿಂದ ಕಲ್ಪಾಶ್ರೀ ಸಂಸ್ಥೆ ಸ್ಥಾಪನೆ ಮಾಡಿದ್ದಾರೆ. ಅವರು ಒಬ್ಬ ಅದ್ಭುತ ನೃತ್ಯಗಾರ. ಮಾನವೀಯತೆ ಇರುವ ಕಲಾವಿದ. ಚನ್ನಪಟ್ಟಣದಲ್ಲಿ ಕಲ್ಪಾಶ್ರೀ ಸಂಸ್ಥೆಯನ್ನು ಮೂವತ್ತು ವರ್ಷಗಳ ಹಿಂದೆ ಆರಂಭಿಸಿ, ಬೆಂಗಳೂರು ಹೈದ್ರಾಬಾದ್‌ನಲ್ಲಿ ಸಬ್ ಬ್ರಾಂಚ್‌ಗಳು ಇವೆ. ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ನೃತ್ಯ, ಸಂಗೀತ ತರಬೇತಿ ಪಡೆದುಕೊಂಡಿದ್ದಾರೆ. ಕಲ್ಪಾಶ್ರೀ ಸಂಸ್ಥೆ ವತಿಯಿಂದ ಚನ್ನಪಟ್ಟಣದಲ್ಲಿ ಬಡ ಮಕ್ಕಳಿಗೆ ಉಚಿತವಾಗಿ ನೃತ್ಯ ತರಬೇತಿ ನೀಡುತ್ತಿದ್ದಾರೆ. ಗ್ರಾಮಾಂತರ ಪ್ರದೇಶದ ಹಳ್ಳಿಗಳಿಗೆ ಹೋಗಿ ನೃತ್ಯ

Read More

“ಸನಾದಿ ಅಪ್ಪಣ್ಣ” ಚಿತ್ರದಲ್ಲಿ ಶಹನಾಯ್ ನುಡಿಸಿದ್ದು ನಾನೋ ಅವರೋ ಗೊತ್ತಾಗ್ತಾಯಿಲ್ಲ ಅಂದರು, “ಬಿಸ್ಮಿಲ್ಲಾಖಾನ್ “

ಅವಳ ಹೆಸರು ಬಸಂತಿ. ಆಕೆ ಅಪರೂಪದ ಸೌಂದರ್ಯವತಿ. ಜತೆಗೆ ನಾಟ್ಯರಾಣಿ, ಅವಳ ಮೇಲೆ ಊರಿನ ಸಾಹಿಕಾರನಿಗೆ ಕಣ್ಣಿರುತ್ತದೆ. ಇಂಥ ಬಸಂತಿ ಇದ್ದ ಊರಲ್ಲಿಯೇ ಅಪ್ಪಣ್ಣ ಕೂಡ ಇರುತ್ತಾನೆ. ದೇವಾಲಯದಲ್ಲಿ ಮಂಗಳ ಕಾರ್ಯಗಳಲ್ಲಿ ಸನಾದಿ ನುಡಿಸುವದು ಅವನ ಪ್ರೀತಿಯ ಕೆಲಸ, ಈ ಕಾರಣದಿಂದಲೇ ಊರ ತುಂಬ ಆತ ಸನಾದಿ ಅಪ್ಪಣ್ಣ ಎಂದೇ ಹೆಸರುವಾಸಿಯಾಗಿರುತ್ತಾನೆ. ಅವನ ಸನಾದಿಯ ನೀನಾದಕ್ಕೆ ತಲೆದೂಗದವರೇ ಇರುವದಿಲ್ಲ. ಹೀಗಿದ್ದಾಗಲೇ ಅಪ್ಪಣ್ಣನ ಸನಾದಿಯ ನೀನಾದದ ಜೊತೆಯಲ್ಲಿ ನೃತ್ಯ ಮಾಡಬೇಕು ಎಂಬ ಹಿರಿಯಾಸೆ ಬಸಂತಿಗೆ ಬರುತ್ತದೆ. ಆಕೆ ಅದನ್ನೇ

Read More

ಡಾ.ರಾಜ್‌ಕುಮಾರ್ ನಂತಹ ಮತ್ತೊಬ್ಬ ನಟ ಮತ್ತೆ ಹುಟ್ಟಲು ಸಾಧ್ಯವೇ….?

ಡಾ.ರಾಜ್‌ಕುಮಾರ್ ಒಬ್ಬ ಅಕ್ಷರಶಃ ‘ದೇವತಾ ಮನುಷ್ಯ’. ಸಿನಿಮಾ ಅಷ್ಟೇ ಅಲ್ಲ ವೈಯಕ್ತಿಕ ಬದುಕಿನಲ್ಲೂ ಆದರ್ಶ ವ್ಯಕ್ತಿ. ಅವರ ಚಿತ್ರಗಳಲ್ಲಿ ಅದೆಂಥ ಪ್ರೀತಿ..? ಅದೆಂಥ ಅದ್ಭುತ ನಟನೆ..? ಅವರು ಹೆಂಡತಿಯನ್ನು ಪ್ರೀತಿಸಿದ ಹಾಗೆ, ಗೌರವಿಸಿದ ಹಾಗೆ ಯಾರಾದರೊಬ್ಬ ಪುರುಷ ಪ್ರೀತಿಸಲು ಸಾಧ್ಯವಾ..? ಇದ್ದರೆ ಅಂಥ ಗಂಡ ಇರಬೇಕಪ್ಪ, ಹೆಂಡತಿಗೆ ಸ್ವಲ್ಪವೂ ಕಷ್ಟ ಕೊಡದಂತ ಆ ಪಾತ್ರಗಳು, ಎಷ್ಟು ಕಷ್ಟ ಪಡ್ತಿಯೇ ನೀನು? ಎಂಥಹಾ ಒಳ್ಳೆ ಮನಸೇ ನಿಂದು..? ಅಷ್ಟೇ ಅಲ್ಲ ಅಪ್ಪ, ಅಮ್ಮ, ಅತ್ತೆ, ಮಾವ, ಇಡೀ ಕುಟುಂಬವನ್ನು

Read More

ಜನರಪ್ರೀತಿಯಲ್ಲಿ ಮಿಂಚಿ ಮೆರೆದ ಸೃಜನಶೀಲತೆಯ ಮಹಾತಾರೆ, ನಮ್ಮ “ಶಂಕರ್ ನಾಗ್ “..!!

ಇವರು ನಿಜಕ್ಕೂ ಅಚ್ಚರಿಯ ಸೂಪರ್‌ಸ್ಟಾರ್. ಸೋಜಿಗವೆಂದರೆ… ವೃತ್ತಿ ಬದುಕಿನಲ್ಲಿ ಎಂದಿಗೂ ಸೂಪರ್‌ಸ್ಟಾರ್ ಆಗಲಿಲ್ಲಾ. ಆದರೆ ಸಾವಿನ ನಂತರ ದಶಕಗಳೇ ಕಳೆದರೂ ಕೂಡ ಜನಮಾನಸದಲ್ಲಿ ಗಟ್ಟಿಯಾಗಿ ನೆಲೆ ನಿಂತು ಈಗಲೂ ಒಬ್ಬ ಸೂಪರ್‌ಸ್ಟಾರ್ ಎಂದೇ ಕರೆಸಿಕೊಂಡಿರುವ ಅನನ್ಯ ಪ್ರತಿಭೆ ಮತ್ತು ಅತ್ಯಂತ ವೈಶಿಷ್ಟಮಯ ವ್ಯಕ್ತಿತ್ವದ ಏಕಮೇವ ಕನ್ನಡದ ಸೂಪರ್ ಸ್ಟಾರ್ ಎಂದರೆ ಅದು ದಿವಗಂತ ಶಂಕರನಾಗ್ ಉರುಫ್ ಶಂಕರಣ್ಣ. ಸಾರ್ವಕಾಲಿಕ ಸರ್ವಶ್ರೇಷ್ಠ ಸೂಪರ್ ಸ್ಟಾರ್‌ಗಳ ಪಟ್ಟಿಯಲ್ಲಿ ನಿಜಕ್ಕೂ ನಮಗೂ ಅಚ್ಚರಿಯಾಗುವಂತೆ ರಾರಾಜಿಸಿದ ಏಕೈಕ ಸೂಪರ್ ಸ್ಟಾರ್ ಎಂದರೆ ನಮ್ಮ

Read More

“ರಾಜು ಜೇಮ್ಸ್ ಬಾಂಡ್” ಅಣ್ಣಾವ್ರ ಜೇಮ್ಸ್ ಬಾಂಡ್ ಸಿನಿಮಾಗಳ ಆರಾಧಕ…!

ಕರ್ಮ ಬ್ರದರ್ಸ್ ಪ್ರೊಡಕ್ಷನ್ ಅಡಿಯಲ್ಲಿ ಚಾಮುಂಡೇಶ್ವರಿ ಸ್ಟುಡಿಯೋ ಆವರಣದಲ್ಲಿ `ರಾಜು ಜೇಮ್ಸ್ ಬಾಂಡ್’ ಚಿತ್ರವನ್ನು ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಕ್ಲಾಪ್ ಮಾಡುವುದರ ಮುಖಾಂತರ ಹಾಗೂ ಜಿ ಟಿ ದೇವೇಗೌಡ ಅವರು ಕ್ಯಾಮರಾ ಸ್ವಿಚ್ ಆನ್ ಮಾಡುವುದರ ಮುಖಾಂತರ ಸೆಟ್ಟೇರಿತು. ರಾಜು ಹೆಸರಿಗೆ ಬ್ರಾಂಡ್ ಆಗಿರುವ ಗುರುನಂದನ್ ಈಗ ಜೇಮ್ಸ್ ಬಾಂಡ್ ಅದು ದೀಪಕ್ ಮಧುವನಹಳ್ಳಿ ನಿರ್ದೇಶನದಲ್ಲಿ. ರಾಜು ಜೇಮ್ಸ್ ಬಾಂಡ್ ಅಣ್ಣಾವ್ರ ಜೇಮ್ಸ್ ಬಾಂಡ್ ಸಿನಿಮಾಗಳ ಆರಾಧಕ. ಈತ ತನ್ನ ಜೀವನದಲ್ಲಿ ಹಾಗೂ ಸಾಮಾಜಿಕ

Read More

ಮಾಡ್ರನ್ ಮದನಾರಿ “ಊರ್ವಶಿ ರೌಟೇಲಾ”

ಮಾದಕ ಮೈಮಾಟದ ನಟಿಯರು ಇದ್ರೆ, ಆ ಚಿತ್ರಕ್ಕೂ ಒಂದು ವೇಗ. ಹೀಗಾಗಿ ನಿರ್ಮಾಪಕ, ನಿರ್ದೇಶಕರು ತಮ್ಮ ಸಿನಿಮಾಗಳಿಗೆ ಹಾಟ್ ಆಗಿ ಕಾಣುವ ನಟಿಮಣಿಗಳನ್ನೇ ಹುಡುಕುತ್ತಿರುತ್ತಾರೆ. ಅಂಥ ಮದನಾರಿಗಳಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಮಿಸ್ಟರ್ ಐರಾವತ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಮಿಂಚಿದ್ದ ನಟಿ ಊರ್ವಶಿ ರೌಟೇಲಾ ಸದ್ಯ ಬಾಲಿವುಡ್‌ನಲ್ಲಿ ಬೇಡಿಕೆಯ ನಟಿ. ಈಕೆ ಇದೀಗ ಒಂದು ಸಿನಿಮಾಗೆ ಏನಿಲ್ಲ ಅಂದ್ರೂ, ೫ ಕೋಟಿ ಸಂಭಾವನೆ ತೆಗೆದುಕೊಳ್ಳುತ್ತಿದ್ದಾಳೆ. ಬಾಲಿವುಡ್‌ನ ‘ಸನಮ್ ರೇ’ ಮತ್ತು ‘ಗ್ರೇಟ್ ಗ್ರ್ಯಾಂಡ್ ಮಸ್ತಿ’ ಚಿತ್ರದಲ್ಲಿ

Read More

ದಕ್ಷಿಣ ಭಾರತದ, ಒಂದು ಕಾಲದ ಕನ್ನಡದ ಮೇರು ನಟಿ ಮಾಧವಿ ಈಗ ಹೇಗಿದ್ದಾರೆ ?

  ದಕ್ಷಿಣ ಭಾರತದ, ಒಂದು ಕಾಲದ ಕನ್ನಡದ ಮೇರು ನಟಿಯರಲ್ಲಿ ಮಾಧವಿ ಕೂಡ ಒಬ್ಬರು. ಹೈದರಾಬಾದ್‌ನಲ್ಲಿ ಹುಟ್ಟಿದ್ದ ಮಾಧವಿ ಡಾ.ರಾಜ್‌ಕುಮಾರ್, ಶಿವಾಜಿ ಗಣೇಶನ್, ಎನ್‌ಟಿಆರ್, ಅಮಿತಾಭ್ ಬಚ್ಚನ್, ಕಮಲಹಾಸನ್, ಡಾ.ವಿಷ್ಣುವರ್ಧನ್ ಹಾಗೂ ಚಿರಂಜೀವಿ ಮುಂತಾದ ಮೇರು ಸಿನಿ ನಟರ ಜೊತೆ ಮಾಧವಿ ಅಭಿನಯಿಸಿದ್ದಾರೆ. ೧೯೭೬ರಿಂದ ೧೯೯೬ರ ಅವಧಿಯ ಬಹು ಬೇಡಿಕೆಯ ನಟಿಯಾಗಿದ್ದರು ಮಾಧವಿ. ೧೭ ವರ್ಷಗಳ ಕಾಲ ಲೀಡಿಂಗ್ ನಟಿಯಾಗಿ ಸಿನಿಮಾ ರಂಗದಲ್ಲಿ ಸುಮಾರು ೩೦೦ ಸಿನಿಮಾಗಳಲ್ಲಿ ನಟಿಸಿದ್ದಾರೆ. ದಾಸರಿ ನಾರಾಯಣ ರಾವ್ ಅವರ ‘ತೂರ್ಪು ಪಡಮರ’

Read More

ಹತ್ತರ ಬಳಿಕ ಅಭ್ಯರ್ಥಿಗಳ ಹಣೆ ಬರಹ….! ಇದೀಗ ಎಲ್ಲರ ಕಣ್ಣು ಶಿರಾ- ಆರ್‌ಆರ್ ನಗರ ಕ್ಷೇತ್ರದತ್ತ ನೆಟ್ಟಿದೆ.

ಶಿರಾ ಮತ್ತು ರಾಜರಾಜೇಶ್ವರಿ ನಗರ ಅಸೆಂಬ್ಲಿ ಕ್ಷೇತ್ರದ ಉಪಚುನಾವಣೆ ನಿರಾಂತಕವಾಗಿ ಮುಕ್ತಾಯಗೊಂಡಿದೆ ನಿಜ, ಆದರೆ ಫಲಿತಾಂಶ ಏನಾಗುವುದೋ ಎಂಬ ಕುತೂಹಲ ಎಲ್ಲರನ್ನೂ ಕಾಡುತ್ತಿದೆ. ಕೋವಿಡ್ ಹಾವಳಿಯ ನಡುವೆ ನಡೆಯುತ್ತಿರುವ ಚುನಾವಣೆಯಾಗಿರುವುದರಿಂದ, ಚುನಾವಣಾ ಆಯೋಗ ಸಾಕಷ್ಟು ಮುಂಜಾಗೃತಾಕ್ರಮ ತೆಗೆದುಕೊಂಡಿತ್ತು. ನಡೆದ ಮತದಾನ…!!! ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಮತದಾರರನ್ನು ಓಲೈಸಲು ಇನ್ನಿಲ್ಲದ ಕಸರತ್ತನ್ನು ನಡೆಸಿತ್ತು. ಶಿರಾದಲ್ಲಿ ಶೇ. ೮೨.೩೧ ಮತ್ತು ಆರ್.ಆರ್.ನಗರದಲ್ಲಿ ಶೇ.೪೫.೨೪ ಮತದಾನವಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಕ್ಷೇತ್ರದಲ್ಲಿ ತಮ್ಮ

Read More