ಮಾಡ್ರನ್ ಮದನಾರಿ “ಊರ್ವಶಿ ರೌಟೇಲಾ”

Share

ಮಾದಕ ಮೈಮಾಟದ ನಟಿಯರು ಇದ್ರೆ, ಆ ಚಿತ್ರಕ್ಕೂ ಒಂದು ವೇಗ. ಹೀಗಾಗಿ ನಿರ್ಮಾಪಕ, ನಿರ್ದೇಶಕರು ತಮ್ಮ ಸಿನಿಮಾಗಳಿಗೆ ಹಾಟ್ ಆಗಿ ಕಾಣುವ ನಟಿಮಣಿಗಳನ್ನೇ ಹುಡುಕುತ್ತಿರುತ್ತಾರೆ. ಅಂಥ ಮದನಾರಿಗಳಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಮಿಸ್ಟರ್ ಐರಾವತ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಮಿಂಚಿದ್ದ ನಟಿ ಊರ್ವಶಿ ರೌಟೇಲಾ ಸದ್ಯ ಬಾಲಿವುಡ್‌ನಲ್ಲಿ ಬೇಡಿಕೆಯ ನಟಿ.

ಈಕೆ ಇದೀಗ ಒಂದು ಸಿನಿಮಾಗೆ ಏನಿಲ್ಲ ಅಂದ್ರೂ, ೫ ಕೋಟಿ ಸಂಭಾವನೆ ತೆಗೆದುಕೊಳ್ಳುತ್ತಿದ್ದಾಳೆ. ಬಾಲಿವುಡ್‌ನ ‘ಸನಮ್ ರೇ’ ಮತ್ತು ‘ಗ್ರೇಟ್ ಗ್ರ್ಯಾಂಡ್ ಮಸ್ತಿ’ ಚಿತ್ರದಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದರು.

ಇಂಥದೊದು ಅವಕಾಶಕ್ಕಾಗಿ ನಾನು ಬಹುದಿನಗಳಿಂದ ಕಾದಿದ್ದೆ..!

ಊರ್ವಶಿ ಬಾಲಿವುಡ್‌ನಲ್ಲಿ ಸ್ಟಾರ್ ನಟಿ, ಬೋಲ್ಡ್ ದೃಶ್ಯಗಳಿಂದ ಪಡ್ಡೆಗಳ ನಿದ್ದೆ ಕದ್ದಿದ್ದ ಚಿತ್ರ ‘ಹೇಟ್ ಸ್ಟೋರಿ’ ಚಿತ್ರದ ಸೀಕ್ವೇಲ್‌ನ ಭಾಗ-೪ರಲ್ಲಿ ನಟಿಸಿದ್ದಾಳೆ. ಮೊದಲ ಅವತರಣಿಕೆಯಲ್ಲಿ ನಟಿ ಪವೊಲಿ ದಾಮ್ ಮೈಚಳಿ ಬಿಟ್ಟು ನಟಿಸಿದ್ದರು. ಬಳಿಕ ಎರಡು ಮತ್ತು ಮೂರನೇ ಅವತರಣಿಕೆಯಲ್ಲಿ ಕ್ರಮವಾಗಿ ಸುರ್ವಿನ್ ಚಾವ್ಲಾ ಮತ್ತು ಝರೀನ್ ಖಾನ್ ಹಾಟ್ ಆಗಿಯೇ ಕ್ಯಾಮೆರಾ ಎದುರಿಸಿದ್ದರು. ನಾಯಕಿ ಪಾತ್ರವೇ ಮುಖ್ಯ ಇದ್ದ ಪಡ್ಡೆಗಳ ನಿರೀಕ್ಷೆ ಹೆಚ್ಚಿಸಿದ ಹೇಟ್ ಸ್ಟೋರಿ-೪ ಚಿತ್ರದಲ್ಲಿ ಊರ್ವಶಿ ಜೊತೆ ಕರಣ್ ವಾಹಿ ಮತ್ತು ಇಹಾನಾ ದಿಲೋನ್ ಕೂಡ ನಟಿಸಿದ್ದರು. ಊರ್ವಶಿ ಇಂಥದೊಂದು ಅವಕಾಶಕ್ಕಾಗಿ ನಾನು ಬಹುದಿನಗಳಿಂದ ಕಾದಿದ್ದೆ ಎಂದು ಹೇಳಿಕೊಂಡಿದ್ದಾಳೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಮಿಸ್ಟರ್ ಐರಾವತ’ ಚಿತ್ರ
Urvashi Rautela Debut in Teleugu Film Industry

Leave a Comment