ಚಂದನ್ ಶೆಟ್ಟಿಗೆ ಸಂಜನಾ ಆನಂದ್ ನಾಯಕಿ

Share

ಚಂದನ್ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ ಸೂತ್ರಧಾರಿ ಚಿತ್ರಕ್ಕೆ ಸಲಗ ಖ್ಯಾತಿಯ ಸಂಜನಾ ಆನಂದ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.ರ‍್ಯಾಪ್ ಗೀತೆಗಳಿಂದ ಹಾಗೂ ಸಂಗೀತ ನಿರ್ದೇಶನದಿಂದ ಹೆಸರಾಗಿರುವ ಚಂದನ್ ಶೆಟ್ಟಿ ಇದೇ ಮೊದಲ ಬಾರಿಗೆ ನಟಿಸುತ್ತಿರುವ ಚಿತ್ರ ಇದಾಗಿದೆ. ನವರಸನ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಈಗಾಗಲೇ ಶೇ.೯೦ರಷ್ಟು ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಚಿತ್ರದ ಮೊದಲ ಹಾಡಿನ ಚಿತ್ರೀಕರಣ ಇನೋವೇಟೀವ್ ಫಿಲ್ಮ ಸಿಟಿಯಲ್ಲಿ ಅದ್ದೂರಿಯಾಗಿ ಸೆಟ್ಟೆರಿದೆ. ಹೀರೋ ಪರಿಚಯ ಮಾಡುವ ಗೀತೆಯನ್ನು ಡಿಸೆಂಬರ್ ೨೭ರಂದು ಬಿಡುಗಡೆ ಮಾಡುವುದಾಗಿ ಚಿತ್ರ ತಂಡ ಹೇಳಿಕೊಂಡಿದೆ.ಈ ಹಾಡು ಹೊಸ ವರ್ಷದ ಸಂಭ್ರಮಾಚರಣೆಗೆ ಹೇಳಿ ಮಾಡಿಸಿದ ಆಗಿದೆ ಎಂದು ನವರಸನ್ ಹೇಳಿದ್ದಾರೆ. ಹಿರಿಯ ನಟ ತಬಲಾ ನಾಣಿ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

Leave a Comment