ಸಿನಿಮಾ ಎಂಬ ಹಾಲಕಡಲ ಹಂಸಪಕ್ಷಿ,, ‘ಡಾ.ವಿಷ್ಣುವರ್ಧನ್’
ಕನ್ನಡ ಚಿತ್ರರಂಗ ಜನಿಸಿ ೮ ದಶಕಗಳು ಮೀರಿವೆ. ಅದರ ಯೌವ್ವನಾವಸ್ಥೆಯಲ್ಲಿ ತಾರೆಯಾಗಿ ಮೂಡಿಬಂದ ರಾಜ್‌ಕುಮಾರ್ ಸುಮಾರು ೫ ದಶಕಗಳಿಗೂ ಹೆಚ್ಚು ಕಾಲ ಸೂಪರ್‌ಸ್ಟಾರ್ ಆಗಿ ಮೆರೆಯುತ್ತಿದ್ದಾಗ, ಅವರಿಗಿಂತ ೨ ದಶಕ ಕಳೆದು ಚಿತ್ರರಂಗ ಪ್ರವೇಶಿಸಿದ ವಿಷ್ಣುವರ್ಧನ್ ಸುಮಾರು ೪ ದಶಕಗಳಿಗೂ ಹೆಚ್ಚು ಕಾಲ ಅವರಿಗೆ ಸಮಾಂತರವಾಗಿ ಅವರಷ್ಟೇ ಅಭಿಮಾನಿ ಬಳಗ ಯಶಸ್ಸು ಕೀರ್ತಿ, ಎಲ್ಲವನ್ನೂ ಪಡೆದು ಕನ್ನಡ ಚಿತ್ರರಂಗದ ಸಾರ್ವಕಾಲಿಕ ಸರ್ವಶ್ರೇಷ್ಠರ ಪಟ್ಟಿಯಲ್ಲಿ ತಮ್ಮ ಹೆಸರು ದಾಖಲಿಸಿದ್ದು ಒಂದು ಅಪೂರ್ವವಾದ ವಿದ್ಯಮಾನ.
ವಿಷ್ಣುವರ್ಧನ್ ಅವರು ಕಾಲವಾದ ಮೇಲೂ ಇನ್ನೂ ಅವರ ಹೆಸರಿನಲ್ಲಿ ದಿನಕ್ಕೊಂದು ಅಭಿಮಾನಿ ಸಂಘ ಹುಟ್ಟಿಕೊಳ್ಳುತ್ತಿದೆ. ಅಂದ ಮೇಲೆ ಅವರ ಜನಪ್ರಿಯತೆಯನ್ನು ಅಳತೆ ಹಾಕುವ ಅಳತೆಗೋಲು ಸಿಗುವುದೇ..?
ಅಭಿಮಾನಿ ಬಳಗ ಮತ್ತು ಸಮಕಾಲೀನ ಯಶಸ್ಸುಗಳ ಮಾನದಂಡವನ್ನು ಇಟ್ಟುಕೊಂಡು ಹೇಳುವುದಾದರೆ ವಿಷ್ಣುವರ್ಧನ್ ರಾಜ್‌ಕುಮಾರ್‌ರಿಗೆ ಅತ್ಯಂತ ಸಮೀಪ ಸ್ಪರ್ಧಿ ಎಂದೇ ಹೇಳಬಹುದು. ಅಭಿಮಾನ ಆರಾಧನೆ ಎಂಬುದು ಹುಚ್ಚು-ಉನ್ಮಾದ ಹುಟ್ಟಿಸುವಂತಹ ರೀತಿಯಲ್ಲಿ ಕನ್ನಡ ಚಿತ್ರರಂಗದಲ್ಲಿ ಬೆಳೆದುಕೊಳ್ಳುವಂತೆ ಕಾರಣಪುರುಷರಾದದ್ದೇ ಡಾ. ವಿಷ್ಣುವರ್ಧನ್. ಹತ್ತಿರ ಹತ್ತಿರ ರಾಜ್‌ಕುಮಾರ್‌ರಷ್ಟೇ ಅಭಿಮಾನಿ ಬಳಗ ಹೊಂದಿದ್ದ ವಿಷ್ಣುವರ್ಧನ್‌ರಿಗೆ ಅವರು ಕಾಲವಾದ ಮೇಲೂ ಇನ್ನೂ ಅವರ ಹೆಸರಿನಲ್ಲಿ ದಿನಕ್ಕೊಂದು ಅಭಿಮಾನಿ ಸಂಘ ಹುಟ್ಟಿಕೊಳ್ಳುತ್ತಿದೆ. ಅಂದ ಮೇಲೆ ಅವರ ಜನಪ್ರಿಯತೆಯನ್ನು ಅಳತೆ ಹಾಕುವ ಅಳತೆಗೋಲು ಸಿಗುವುದೇ..?
ಬಹುಶಃ ಇನ್ನೂ ೩೦ ವರುಷ ಕಳೆದರೂ ಕೂಡ, ಸಿನಿಮಾಗಳೆಂದರೆ ಹೇಗಿರಬೇಕೆಂಬ ಪಾಠಗಳಿಗೆ ಓದಲೇಬೇಕಾದ ಪುಸ್ತಕ
ನಾಗರಹಾವು..!
ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಚಿತ್ರರಂಗಕ್ಕೆ ಕಾಲಿಟ್ಟ ವಿಷ್ಣು ನಾಗರಹಾವು’ಚಿತ್ರದಿಂದ ಮನೆಮಾತಾಗಿಬಿಟ್ಟರು. ೪೦ ವರ್ಷಗಳ ಅವರ ವೃತ್ತಿಜೀವನದಲ್ಲಿ ಮತ್ತೊಂದು
ನಾಗರಹಾವು’ ಅವರಿಂದ ಸಾಧ್ಯವಾಗಲೇ ಇಲ್ಲ ಎನ್ನಬಹುದು. ನಿಜ. ಮೊದಲ ಚಿತ್ರದಲ್ಲಿನ ಅಭೂತಪೂರ್ವ ಅಭಿನಯದಿಂದ ಕನ್ನಡಿಗರ ಮನಸ್ಸನ್ನು ಗೆದ್ದು ಅವರ ಹೃದಯ ಸಿಂಹಾಸನವನ್ನೇರಿದ ವಿಷ್ಣು ಅಲ್ಲಿಂದ ಮುಂದೆ ಸಾಕಷ್ಟು ಏಳುಬೀಳು ಕಂಡಿದ್ದು ಇದೆ. ಅಲ್ಲಿಂದ ಮುಂದೆ ಹೊಂಬಿಸಿಲು’,
ಬಂಧನ’, ಯಜಮಾನ’ದಂತಹ ಇನ್ನೂ ಅನೇಕಾನೇಕ ಸೂಪರ್‌ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಆದರೆ ಮೊದಲ ಚಿತ್ರದಲ್ಲಿಯೇ ಅವರು ನಿರ್ವಹಿಸಿದ ಪಾತ್ರದಲ್ಲಿನ ಆ ಆವೇಶ, ಆ ಮುಗ್ಧತೆ, ಆ ರೋಷ, ಆ ಹಾವ ಭಾವ ಭಂಗಿ.. ಯಾವುದಕ್ಕೇ ಆದರೂ ಮತ್ತೊಂದು ಚಿತ್ರದಲ್ಲಿ ಅವರಿಗೆ ಅವರೇ ಸಾಟಿಯಾಗಲಿಲ್ಲ. ಬಹುಶಃ ಇನ್ನೂ ೩೦ ವರುಷ ಕಳೆದರೂ ಕೂಡ ಆ ಸಿನಿಮಾ, ಸಿನಿಮಾಗಳೆಂದರೆ ಹೇಗಿರಬೇಕೆಂಬ ಪಾಠಗಳಿಗೆ ಓದಲೇಬೇಕಾದ ಪುಸ್ತಕ.
ನಾಗರಹಾವು’ ಚಿತ್ರದ ಅಭೂತಪೂರ್ವ ಯಶಸ್ಸು ವಿಷ್ಣುವರ್ಧನ್‌ರ ಜನಪ್ರಿಯತೆಯನ್ನು ಎಲ್ಲರಿಗೂ ಕಣ್ಣುಕುಕ್ಕುವಂತೆ ಮಾಡಿತ್ತು ಎಂದರೆ ಅದರಲ್ಲಿ ಅತಿಶಯೋಕ್ತಿ ಇಲ್ಲ. ಹಾಗಾಗಿಯೇ ಇದ್ದಕ್ಕಿದ್ದಂತೆಯೇ ಅವರನ್ನು ವಿರೋಧಿಸುವ ಶಕ್ತಿಯೊಂದು ಉದಯವಾಗಿದ್ದು ಸುಳ್ಳಲ್ಲ. ಸುಮಾರು ೪ ದಶಕಗಳಿಗೂ ಹೆಚ್ಚಿನ ತಮ್ಮ ವೃತ್ತಿಬದುಕಿನಲ್ಲಿ ವಿಷ್ಣು ನಿರಂತರವಾಗಿ ವಿರೋಧಿ ಶಕ್ತಿಗಳೊಂದಿಗೆ ಸೆಣೆಸುತ್ತಾ ಬಂದರೆAಬುದು ಅತ್ಯಂತ ನೋವಿನ ಸಂಗತಿ. ವೃತ್ತಿ ಜೀವನದ ಆರಂಭದಲ್ಲಿ ಸುಮಾರು ಒಂದು ದಶಕಗಳಿಗೂ ಹೆಚ್ಚು ಕಾಲ ಹೀಗೆ ಹಾಗೆ ಎಂದು ಹೊಡೆದಾಡುತ್ತಾ, ಗೆಳೆಯ ದ್ವಾರಕೀಶ್ ಜೊತೆ ಒಂದಷ್ಟು ಅಮೂಲ್ಯ ಸಿನಿಮಾಗಳನ್ನು ನೀಡಿದ ವಿಷ್ಣುವರ್ಧನ್.
ಕನ್ನಡ ಚಿತ್ರರಂಗದಲ್ಲಿ ಆಕ್ಷನ್ ಚಿತ್ರಗಳ ಹೊಸ ಯುಗವೊಂದನ್ನೇ ಆರಂಭಿಸಿದ ಕೀರ್ತಿ ‘ಸಾಹಸಸಿಂಹ’ ಚಿತ್ರಕ್ಕೆ ಸಲ್ಲುತ್ತದೆ.
ವಿಷ್ಣು ರವರ ಬದುಕಿನಲ್ಲಿ ಒಂದು ಮಹತ್ತರ ಬದಲಾವಣೆ ಕಂಡಿದ್ದೆಂದರೆ `ಸಾಹಸಸಿಂಹ’ ಚಿತ್ರದ ನಂತರ.
ಕನ್ನಡ ಚಿತ್ರರಂಗದಲ್ಲಿ ಆಕ್ಷನ್ ಚಿತ್ರಗಳ ಹೊಸ ಯುಗವೊಂದನ್ನೇ ಆರಂಭಿಸಿದ ಕೀರ್ತಿ ‘ಸಾಹಸಸಿಂಹ’ ಚಿತ್ರಕ್ಕೆ ಸಲ್ಲುತ್ತದೆ. ಅಲ್ಲಿಂದ ಮುಂದೆ ವಿಷ್ಣುವರ್ಧನ್ ಸಾಹಸಸಿಂಹ ಎಂಬ ಬಿರುದಿನಿಂದಲೇ ಬೆಳೆಯತೊಡಗಿದರು. ಕೆಲವೇ ದಿನಗಳಲ್ಲಿ ಸಾಹಸಸಿಂಹನ ಅಪಾರ ಅಭಿಮಾನಿ ಸಂಘಗಳು ಹುಟ್ಟಿಕೊಂಡವು. ಆ ನಂತರದ ದಿನಗಳಲ್ಲಿ ಕೂಡ ಅವರು ಮತ್ತು ಅವರ ಅಭಿಮಾನಿಗಳು ಸಂಘರ್ಷಗಳ ಜೊತೆ ಸಾಗುತ್ತಾ ಬದುಕುವುದು ದಿನಚರಿಯಾಗಿಹೋಗಿತ್ತು. ಎಷ್ಟೋ ಬಾರಿ ಬೇಸತ್ತ ವಿಷ್ಣುವರ್ಧನ್ ನಾನು ಕನ್ನಡ ಚಿತ್ರರಂಗವನ್ನು ಬಿಟ್ಟುಹೋಗುತ್ತೇನೆ ಎಂದದ್ದೂ ಉಂಟು. ಆನಂತರದ ದಿನಗಳಲ್ಲಿ ಅಭಿಮಾನಿಗಳ ಅಭಿಮಾನದ ಅತಿರೇಕಗಳಿಗೆ ಕರಗಿ ನಿರ್ಧಾರ ಬದಲಿಸಿದ್ದೂ ಉಂಟು.
ಆಂತರಿಕವಾಗಿ ಎಷ್ಟೇ ನೋವುಗಳಿದ್ದರೂ ಕೂಡ ವಿಷ್ಣುವರ್ಧನ್ ರವರು ಹೊರಗೆ ಸದಾ ಹಸನ್ಮುಖಿಯಾಗಿಯೇ ಕಾಣಿಸಿಕೊಳ್ಳುತ್ತಿದ್ದ ಕರುಣಾಮಯಿ..!!!
ಆ ದಿನಗಳಲ್ಲಿ ಅವರು ಅನುಭವಿಸಿದ ಸಂಘರ್ಷ ಮತ್ತು ಅದರಿಂದ ಉಂಟಾದ ಆಘಾತ ನೋವುಗಳಿಗೆ ಲೆಕ್ಕವೇ ಇಲ್ಲ. ಭಾರತಿ ಅವರನ್ನು ಮದುವೆಯಾದ ದಿವಸ ಮದುವೆಮನೆಯ ಬಳಿ ನಡೆದ ಸಂಘರ್ಷದಿಂದ, ಆ ನಂತರ ಅನುಭವಿಸಿದ ಚಿತ್ರಹಿಂಸೆಗಳು ಹಲ್ಲೆಗಳು ಅವಮಾನ ಇತ್ಯಾದಿಗಳಿಂದ ವಿಷ್ಣು ತುಂಬಾ ಜರ್ಜರಿತರಾಗಿದ್ದೂ ಉಂಟು.
ಆಂತರಿಕವಾಗಿ ಎಷ್ಟೇ ನೋವುಗಳಿದ್ದರೂ ಕೂಡ ವಿಷ್ಣುವರ್ಧನ್ ಹೊರಗೆ ಸದಾ ಹಸನ್ಮುಖಿಯಾಗಿಯೇ ಕಾಣಿಸಿಕೊಳ್ಳುತ್ತಿದ್ದರು. ನೆರೆದ ಸಭೆಯ ಕಡೆ ಒಮ್ಮೆ ಕೈಬೀಸಿದರೆಂದರೆ ಅಭಿಮಾನಿ ಬಳಗ ಹುಚ್ಚೆದ್ದು ಕುಣಿಯುತ್ತಿತ್ತು. ಸಾಹಸಸಿಂಹನ ಖದರ್ ಅಂಥದಿತ್ತು. ಅಲ್ಲಿಂದ ಮುಂದೆ ಒಂದಕ್ಕಿಂತ ಒಂದು ಆಕ್ಷನ್ ಚಿತ್ರಗಳಲ್ಲಿ ಮಿಂಚುತ್ತಾ ಕನ್ನಡ ಪ್ರೇಕ್ಷಕನಿಗೆ ರಸದೌತಣ ನೀಡಿದರು ಡಾ. ವಿಷ್ಣುವರ್ಧನ್. ಅವರ ಆಕ್ಷನ್ ಸಿನಿಮಾಗಳಲ್ಲೇ ಮಹೋನ್ನತ ಎತ್ತರಕ್ಕೆ ಕೊಂಡೊಯ್ಯುವಂತೆ `ಖೈದಿ’ ಸಿನಿಮಾ ಘರ್ಜನೆ ಮಾಡಿತ್ತು. ಅದರ ಹಾಡು ಮತ್ತು ನಾಯಕಿ ಮಾಧವಿಯವರ ಜೊತೆಗಿನ ಪ್ರಣಯ ಸನ್ನಿವೇಶಗಳಿಂದ ಅಪಾರ ಸುದ್ದಿ ಮಾಡಿತ್ತು. ಆ ನಂತರದ ದಿನಗಳಲ್ಲಿ ಆಕ್ಷನ್ ಸಿನಿಮಾಗಳ ಜೊತೆ ಜೊತೆಗೆ ಅವರು ಕೌಟುಂಬಿಕ ಆಧಾರಿತ ಮತ್ತು ಪ್ರೇಮಮಯ ಸಿನಿಮಾಗಳನ್ನು ಕೂಡ ಸಮರ್ಥವಾಗಿ ನಿಭಾಯಿಸಲು ಆರಂಭಿಸಿದ್ದರು. ಹಾಗಾಗಿಯೇ ನೀ ಬರೆದ ಕಾದಂಬರಿ, ಕೃಷ್ಣಾ ನೀ ಬೇಗನೇ ಬಾರೋದಂಥಹಾ ಭಾವುಕ ಮತ್ತು ರೋಮ್ಯಾಂಟಿಕ್ ಸಿನಿಮಾಗಳೂ ಸಿದ್ದವಾಗಿದ್ದು. ಈ ಕಾಲಘಟ್ಟದಲ್ಲಿಯೇ ಅವರಿಗೆ ಅಭಿನಯಕ್ಕೆ ಸವಾಲೊಡ್ಡುವ ಅನೇಕ ಅವಕಾಶಗಳು ಹುಡುಕಿಕೊಂಡು ಬಂದಿದ್ದವು. ಪೌರಾಣಿಕ ಮತ್ತು ಐತಿಹಾಸಿಕ ಪಾತ್ರಗಳಲ್ಲಿ ಹೆಚ್ಚಾಗಿ ತಲೆಹಾಕದ ವಿಷ್ಣುವರ್ಧನ್ ತಮ್ಮ ಇತಿಮಿತಿಗಳನ್ನು ಅರಿತಿದ್ದರಿಂದಲೇ ತಮ್ಮ ಸಾಮರ್ಥ್ಯವನ್ನು ಸಮರ್ಥವಾಗಿ ಪ್ರತಿಬಿಂಬಿಸುವ ಆಯ್ದ ಚಿತ್ರಗಳಲ್ಲಿ ಮಾತ್ರ ಅಭಿನಯಿಸುವ ಪರಿಪಾಠಕ್ಕೆ ಮುಂದಾದರು. ಇದೇ ಕಾರಣದಿಂದಾಗಿ ಅವರ ಇಮೇಜು ಮತ್ತು ಯಶಸ್ಸು ಎರಡೂ ಕೂಡ ಕೊನೆಯವರೆಗೂ ಏರುಗತಿಯಲ್ಲೇ ಇದ್ದದ್ದು ಗಮನಾರ್ಹ.
ವೃತ್ತಿಬದುಕಿನಲ್ಲಿ ಯಶಸ್ಸಿನ ಉತ್ತುಂಗಕ್ಕೇರಿದ ವಿಷ್ಣು ಆಂತರಿಕವಾಗಿ ವಿಷಣ್ಣರಾಗಿದ್ದರು. ಬದುಕಿನ ಸರಳ ಸತ್ಯಗಳನ್ನು ಒಪ್ಪಿಕೊಳ್ಳಲಾಗದೆ ಎದುರಿಸಲು ಸಾಧ್ಯವಾಗದೇ ಒದ್ದಾಡುತ್ತಿದ್ದರು. ಮೇಲ್ನೋಟಕ್ಕೆ ಸಿಂಹದಂತೆ ಘರ್ಜಿಸಿದರೂ ಆಂತರ್ಯದಲ್ಲಿ ಹಸುಗೂಸಿನಂತೆ ಮೆತ್ತಗಿದ್ದರು. ವಿಷ್ಣುವಿಗೆ ಈ ಸಂಘರ್ಷಗಳನ್ನು ಎದುರಿಸುವ ಚೈತನ್ಯವಿದ್ದರೂ ಆ ದುಷ್ಟಮನಸಿರಲಿಲ್ಲ. ಹಾಗೆ ಸೂಕ್ಷ್ಮ ಜೀವಿ ಯಾಗಿದ್ದರಿದಲೇ ಅವರು ಅಷ್ಟು ಜರ್ಜರಿತರಾಗಿದ್ದರು ಎಂಬುದು ಸುಳ್ಳಲ್ಲ. ಬದುಕೆಂದರೆ ಹೀಗೆಯೇ… ಜನರೆಂದರೆ ಹೀಗೆಯೇ… ಇಲ್ಲಿ ಬದುಕಬೇಕಾದರೆ ನಗುನಗುತ್ತಲೇ ಆಷಾಢಭೂತಿತನ ತೋರಿಸಬೇಕಾಗುತ್ತದೆ ಎಂಬ ಸರಳಸತ್ಯವನ್ನು ವಿಷ್ಣು ಒಪ್ಪಿಕೊಳ್ಳಲೇ ಇಲ್ಲ.
ವೈಯಕ್ತಿಕವಾಗಿ ವಿಷ್ಣು ರವರಿಗೆ ಎಷ್ಟೇ ಹಾನಿಯಾಗಿದ್ದರೂ, ಸಾರ್ವತ್ರಿಕವಾಗಿ ನಾಡಿಗೆ ಮತ್ತು ಚಿತ್ರರಂಗಕ್ಕೆ ಸಲ್ಲಿಸಿದ ಮಹಾನ್ ಕೊಡುಗೆ ಎಂದೇ ಚಿತ್ರರಂಗ ಭಾವಿಸಿ ಅವರ ಸಂಯಮಕ್ಕೆ ನಮಿಸಲೇಬೇಕು.
ಹಿಪಾಕ್ರಸಿ ಎಂಬುದು ಅವರ ಜೀವನದಲ್ಲಿ ಎಂದಿಗೂ ಬರಲೇ ಇಲ್ಲಾ. ಈ ಜಗತ್ತು ಈ ಜನ ಹೀಗೆಯೇ ಎಂದು ಒಪ್ಪಿಕೊಳ್ಳುವುದನ್ನು ಬಿಟ್ಟು, ಅದು ಹಾಗೇಕೆ ಎಂದು ಪ್ರಶ್ನಿಸುತ್ತಾ ಹೋದರು. ನನಗೇಕೆ ಈ ಶಿಕ್ಷೆ ಎಂದು ಜೋರು ಧ್ವನಿಯಲ್ಲಿಯೂ ಕೇಳದೇ ತಮ್ಮೊಳಗೇ ಪರಿತಪಿಸುತ್ತಾ ಹೋದರು. ಮೋಸದ ಸೋಲುಗಳನ್ನು ಎಂದೂ ಒಪ್ಪಿಕೊಳ್ಳದ ಸ್ವಾಭಿಮಾನಿ ವಿಷ್ಣು ಆ ಕಾರಣಕ್ಕಾಗಿಯೇ ಮಾತಿಗೆ ನಿಲುಕದೆ ಮೌನಿಯಾಗ ತೊಡಗಿದರು. ವಿಷ್ಣು ಎಂದಿಗೂ ಆಕ್ರಮಣಶೀಲ ವ್ಯಕ್ತಿತ್ವ ತೋರಿಸಲೇ ಇಲ್ಲ. ಒಂದು ವೇಳೆ ಅವರೇನಾದರೂ ಸಂಯಮ ಕಳೆದುಕೊಂಡು ಆವೇಶ ಮತ್ತು ಆಕ್ರಮಣ ಮನೋಭಾವಕ್ಕೆ ಒಳಗಾಗಿದ್ದರೆಂದರೆ ಕನ್ನಡ ಚಿತ್ರರಂಗದಲ್ಲಿ ಒಂದು ರಕ್ತೇತಿಹಾಸವೇ ನಡೆದುಹೋಗುತ್ತಿತ್ತು ಎಂಬುದರಲ್ಲಿ ಸಂಶಯವೇ ಇಲ್ಲ. ಅವರಿಗೆ ಆ ಶಕ್ತಿ ಇತ್ತು. ಅದು ಅವರಿಗೂ ಗೊತ್ತಿತ್ತು. ಆದರೂ ತಮ್ಮ ಶಕ್ತಿಯ ದುರ್ಬಳಕೆ ಮಾಡಿಕೊಳ್ಳದ ವಿಷ್ಣು ಸೈನ್ಯ ಕಟ್ಟಿ ಹೋರಾಟಕ್ಕೆ ಇಳಿಯದೇ, ರಕ್ಷಣಾತ್ಮಕವಾಗಿ ಕೋಟೆ ಕಟ್ಟಿಕೊಂಡು ಅಂತರ್ಮುಖಿಯಾಗಿ ಉಳಿದುಬಿಟ್ಟರು. ಅದು ವೈಯಕ್ತಿಕವಾಗಿ ಅವರಿಗೆ ಎಷ್ಟೇ ಹಾನಿಯಾಗಿದ್ದರೂ ಸಾರ್ವತ್ರಿಕವಾಗಿ ನಾಡಿಗೆ ಮತ್ತು ಚಿತ್ರರಂಗಕ್ಕೆ ಸಲ್ಲಿಸಿದ ಮಹಾನ್ ಕೊಡುಗೆ ಎಂದೇ ಚಿತ್ರರಂಗ ಭಾವಿಸಿ ಅವರ ಸಂಯಮಕ್ಕೆ ನಮಿಸಲೇಬೇಕು.
ಸರೋವರದ ತುಂಬ ತುಂಬಿರುವ ಕೊಕ್ಕರೆ, ಬಾತುಕೋಳಿ ಇತ್ಯಾದಿಗಳ ಮಧ್ಯೆ ಹಂಸವೊಂದು ನಡೆದು ಬಂದರೆ ಅದು ಯಾರ ಕಣ್ಣಿಗೆ ತಾಕುವುದಿಲ್ಲ ಹೇಳಿ? ಯಾರಲ್ಲಿ ಅಸೂಯೆ ಹುಟ್ಟಿಸುವುದಿಲ್ಲ ಹೇಳಿ? ವಿಷ್ಣು ಹಾಗಿದ್ದರು.
ಇಷ್ಟಕ್ಕೂ ವಿಷ್ಣುರನ್ನು ಕಂಡರೆ ವಿನಾಕಾರಣ ಬಹಳಷ್ಟು ಜನರಲ್ಲಿ ಅದೇಕೆ ಆ ಪರಿಯ ದ್ವೇಷ ಏರುತ್ತಿತ್ತು ಗೊತ್ತೇ? ಅದು… ಅಸೂಯೆಗೆ. ಹೌದು. ಅದರಲ್ಲಿ ಬೇರೆ ಮಾತೇ ಇಲ್ಲ. ಸರೋವರದ ತುಂಬ ತುಂಬಿರುವ ಕೊಕ್ಕರೆ ಬಾತುಕೋಳಿ ಇತ್ಯಾದಿಗಳ ಮಧ್ಯೆ ಹಂಸವೊಂದು ನಡೆದು ಬಂದರೆ ಅದು ಯಾರ ಕಣ್ಣಿಗೆ ತಾಕುವುದಿಲ್ಲ ಹೇಳಿ? ಯಾರಲ್ಲಿ ಅಸೂಯೆ ಹುಟ್ಟಿಸುವುದಿಲ್ಲ ಹೇಳಿ? ವಿಷ್ಣು ಹಾಗಿದ್ದರು. ಆ ರೂಪ ಆ ನಿಲುವು ಆ ಅಂದ ಚಂದ ಬಣ್ಣ ಮೋಹಕ ನಗು ಮಿಂಚಿನಂತೆ ಸೆಳೆವ ವ್ಯಕ್ತಿತ್ವ ಪ್ರತಿಯೊಂದೂ ಕೂಡ ಅಭಿಮಾನಿಗಳಿಗೆ ಪುಳಕ ತಂದರೆ ವಿರೋಧಿಗಳಲ್ಲಿ ಅಷ್ಟೇ ಅಸೂಯೆ ಹುಟ್ಟಿಸುತ್ತಿತ್ತು. ಹಾಗಾಗಿಯೇ ಅವರ ವಿರುದ್ಧ ಇಲ್ಲಸಲ್ಲದ ಆರೋಪ ಅಪವಾದ ಅವಮಾನ ಇತ್ಯಾದಿಗಳು ಜರುಗುತ್ತಲೇ ಹೋದವು.
“ವಿಷ್ಣು ಎಂದರೆ ನಿಜವಾದ ನಾಗರ ಹಾವು”…!
ವಿಷ್ಣು ವಿಷಕಂಠನಂತೆ ಎಲ್ಲವನ್ನೂ ಕಂಠದಲ್ಲೇ ಭರಿಸಿಕೊಂಡರೇ ಹೊರತು, ಎದೆಗೆ ಇಳಿಯಲು ಬಿಡಲಿಲ್ಲ, ತಲೆಗೆ ಏರಲು ಬಿಡಲಿಲ್ಲ ಅಥವಾ ಆ ವಿಷ ಹೊರಗೆ ಕಾರಲೂ ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಹೇಳುವುದಾದರೆ ಸ್ವತಃ ಭಾರತಿ ವಿಷ್ಣುವರ್ಧನ್‌ರವರೇ ಒಪ್ಪಿ ಮೆಚ್ಚಿಕೊಂಡು ತಲೆದೂಗಿದ ಮಾತೊಂದಿದೆ. “ವಿಷ್ಣು ಎಂದರೆ ನಿಜವಾದ ನಾಗರ ಹಾವು. ಹೌದು ಎಲ್ಲರೂ ನಂಬಿರುವAತೆ ನಾಗರಹಾವು ಕ್ರೂರಿ ಅಲ್ಲ. ಅದಕ್ಕೆ ನಿಜವಾಗಲೂ… ಜನರೆಂದರೇ ಹೆದರಿಕೆ. ಒಂದು ಕ್ಷಣ ಅಲ್ಲೆಲ್ಲೋ ಕಣ್ಣಿಗೆ ಬಿದ್ದರೆ, ಮತ್ತೊಂದು ಕ್ಷಣದಲ್ಲೇ ಗೂಡು ಸೇರಿಕೊಳ್ಳಲು ತವಕಿಸುವ ನಾಚಿಕೆಯ ಜೀವಿ. ಅದಕ್ಕೆ ಸ್ವತಃ ತನ್ನಲ್ಲಿ ವಿಷವಿರುವುದೂ ಕೂಡ ಗೊತ್ತಿರುವುದಿಲ್ಲ. ಅಪ್ಪಿತಪ್ಪಿ ಯಾರಾದರೂ ಅಡ್ಡ ಹಾಕಿದರೆ ಮಾತ್ರ ರಕ್ಷಣೆಗೆಂದು ಹೆಡೆ ಎತ್ತಿ ನಿಂತು ಬುಸುಗುಡುತ್ತದೆ. ಬಿಟ್ಟರೆ ಓಡಿ ಹೋಗುತ್ತದೆ. ಹತ್ತಾರು ಬಾರಿ ಬುಸುಗುಟ್ಟಿ ಹೆಡೆ ಬಿಚ್ಚಿ ಅಪ್ಪಳಿಸಿ ಎಚ್ಚರಿಸುತ್ತದೆ ಅದರೆ ಕಚ್ಚುವುದಿಲ್ಲ. ಅನಿವಾರ್ಯವಾದಾಗ ಮಾತ್ರ ಕಚ್ಚುತ್ತದೆ ಅದೂ ತನಗೆ ಆದ ಹಿಂಸೆ ತಾಳಲಾಗದ ಹಾಗೆ ಆದಾಗ ಮಾತ್ರ. ಹಾಗೆ ಸುಮ್ಮನಿದ್ದರೂ ಕೂಡಾ ಹೋಗೀ ಹೋಗೀ ಕೆಣಕುವ ಕೆಲವು ಜನ ಹುತ್ತದಿಂದ ಎಳೆದು ಹಿಂಸಿಸಿ ಕಾಲು ತುಳಿದು ಕಚ್ಚಿಸಿಕೊಳ್ಳುತ್ತಾರೆ. ಆಮೇಲೆ ಆ ನಿಶ್ಪಾಪಿ ಹಾವು ಕಚ್ಚಿತೆಂದು ಅಪಪ್ರಚಾರ ಮಾಡುತ್ತಾರೆ. ವಿಷ್ಣು ಇದ್ದದ್ದು ಹಾಗೆಯೇ, ಅವರು ನಿಜವಾದ `ನಾಗರಹಾವು’.
ಕೃಪೆ: ನಮ್ಮ ಸೂಪರ್ ಸ್ಟಾರ್ಸ್ ಸಿನಿಮಾಸ ಪತ್ರಿಕೆಯಲ್ಲಿ ಪ್ರಕಟವಾದ ಮಳವಳ್ಳಿ ಪ್ರಸನ್ನ ರವರ ಅಂಕಣ.