ಜಮಾಲಿಗುಡ್ಡ ಚಿತ್ರದಲ್ಲಿ ಹಿರೋಷಿಮಾ- ನಾಗಸಾಕಿ

Share

ನಿಹಾರಿಕಾ ಪ್ರೊಡಕ್ಷನ್ ಅಡಿಯಲ್ಲಿ ಕುಶಾಲಗೌಡ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ ಚಿತ್ರದಲ್ಲಿ ಡಾಲಿ ಧನಂಜಯ ಜತೆಯಲ್ಲಿ ಯಶ್‌ಶೆಟ್ಟಿ ಅಭಿನಯಿಸುತ್ತಿದ್ದಾರೆ. ಅವರಿಬ್ಬರ ಪಾತ್ರಗಳಿಗೆ ಹಿರೋಷಿಮಾ ಮತ್ತು ನಾಗಸಾಕಿ ಎಂದು ಹೆಸರಿಡಲಾಗಿದೆ. ಈ ರೀತಿ ಹೆಸರುಗಳನ್ನು ಇಡುವುದಕ್ಕೆ ಕಾರಣವೆಂದರೆ ಯಾವ ರೀತಿ ಎರಡು ನಗರಗಳು ನಾಶವಾದವೋ ಅದೇ ರೀತಿ ದುರ್ಘಟನೆಗಳಿಂದ ಈ ಎರಡು ಪಾತ್ರಗಳು ಒಳಗೊಂಡಿವೆ.

ನಟ ರಾಕ್ಷಸ ಎಂದು ಕರೆಯುವ ಧನಂಜಯ ಜೋಡಿಯಾಗಿ ಬೆಣ್ಣೆ ನಗರಿ ಚಲುವೆ ಅದಿತಿ ಪ್ರಭುದೇವ ಈ ಚಿತ್ರದಲ್ಲಿ ನಟಿಸಿದ್ದಾರೆ. ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ ಚಿತ್ರದಲ್ಲಿ ಕಥೆಯೇ ಪ್ರಧಾನ ಪಾತ್ರ ವಹಿಸಲಿದೆ. ಈ ಚಿತ್ರದ ಇನ್ನಿತರ ತಾರಾಗಣಗಳೆಂದರೆ ಪ್ರಕಾಶ್ ಬೆಳವಾಡಿ, ಭಾವನಾ ಮತ್ತು ಪ್ರಣಯ್ ಪಿ. ರಾವ್.
ಡಾಲಿ ಪ್ರೊಡಕ್ಷನ್ಸ್ ಪ್ರಾರಂಭಿಸಿ ಬಡವರಾಸ್ಕಲ್ ಮತ್ತು ಹೆಡ್ ಬುಷ್ ಚಿತ್ರಗಳನ್ನು ನಿರ್ಮಿಸಿ ಯಶಸ್ವಿಯಾದ ಧನಂಜಯ, ಮತ್ತೊಂದು ನಿರ್ಮಿಸುತ್ತಿರುವ ಚಿತ್ರವಾದ ಟಗರುಪಲ್ಯಾ ಚಿತ್ರದಲ್ಲಿ ಲವ್ಲಿ ಸ್ಟಾರ್ ಪ್ರೇಮ್ ಮಗಳಿಗೆ ಹಿರೋಯಿನ್ ಅವಕಾಶವನ್ನು ನೀಡಿದ್ದಾರೆ.

Leave a Comment