ದೂರದ ಇಂಗ್ಲೆಂಡಿನಲ್ಲಿ ಕನ್ನಡ ಸಿನಿಮಾಗಳ ಪ್ರೀಮಿಯರ್ ಶೋ ಗಳನ್ನು ನಡೆಸುತ್ತಿದೆ, “ವಿಷನ್‌ನೈರ್ ಎಂಟರ್ ಟೈನ್ ಮೆಂಟ್ “..!

Share

ಶ್ಯಾಶ್ ಕಿರಣ್ ಮೂಲತಃ ಬೆಂಗಳೂರಿನವರು. ಈಗ ಇಂಗ್ಲೆಂಡಿನಲ್ಲಿ ಬದುಕು ಮೂಡಿಸಿಕೊಂಡರೂನು ತಂದೆ ತಾಯಿ ನೆಲೆಸಿರುವುದು ಬೆಂಗಳೂರಿನಲ್ಲಿಯೇ. ಒಬ್ಬ ಕ್ರಿಕೆಟ್ ಆಟಗಾರರಾಗಿ ರಣಜಿ ಸ್ಥಾನಕ್ಕೆ ಪೈಪೋಟಿ ನೀಡುವ ಹಂತದವರೆಗೂ ಹೋಗಿದ್ದ ಶ್ಯಾಶ್ ನಂತರ ಇನ್ವೆಸ್ಟ್ ಮೆಂಟ್ ಬ್ಯಾಂಕರ್ ಕೆಲಸದಿಂದಾಗಿ ಇಂಗ್ಲೆಂಡ್ ನಲ್ಲಿ ನೆಲೆಸಿದರು. ಅಲ್ಲಿ ಕನ್ನಡ ಭಾಷೆಯ ಚಿತ್ರಗಳು ಬರುತ್ತಿದ್ದರೂ ಅದೊಂದು ಕಮ್ಯೂನಿಟಿ ಹಂತದಲ್ಲಿತ್ತು. ಕನ್ನಡ ಸಂಘದವರು ಅಥವಾ ಪುಟ್ಟ ಸಂಘಟನೆಗಳು ಚಿತ್ರದ ಶೋ ಏರ್ಪಡಿಸುತ್ತಿದ್ದರು. ಆದರೆ ಬೇರೆ ಭಾಷೆಯ ಚಿತ್ರಗಳು ದೊಡ್ಡ ಮಟ್ಟದಲ್ಲಿ ರಿಲೀಸ್ ಆಗಿ ವಾರದ ಕೊನೆಯಲ್ಲಂತೂ ಚಿತ್ರಮಂದಿರ ತುಂಬಿತುಳುಕುತ್ತಿದ್ದವು. ಶ್ಯಾಶ್ ಕಿರಣ್ ಗೆ ಇದನ್ನೆಲ್ಲಾ ನೋಡಿ ನಾವೂ ಏನಾದರೂ ಮಾಡಬೇಕು. ಕನ್ನಡ ಚಿತ್ರಗಳೂ ಇಲ್ಲಿ ದೊಡ್ಡ ಚಿತ್ರಮಂದಿರಗಳಲ್ಲಿ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗಬೇಕು ಅನ್ನುವ ಕನಸು ಹೊಂದಿದ್ದರು. ಇದನ್ನು ಒಮ್ಮೆ ಶಿವಣ್ಣನ ಬಳಿ ಚರ್ಚಿಸುತ್ತಿದ್ದಾಗ ಶಿವಣ್ಣ ನೀವು ಪ್ರಾರಂಭಿಸಿ ನಿಮಗೆ ಬೇಕಾದ ಎಲ್ಲ ಬೆಂಬಲ ನಾನು ನೀಡುತ್ತೇನೆ ಅಂದಿದ್ದರು. ಆಗ ಶಿವಣ್ಣನ ಆಶೀರ್ವಾದ ಬೆಂಬಲದಿಂದ ಶುರುವಾಗಿದ್ದು ಈ ವಿಜನೈರ್ ಎಂಟರ್ ಟೈನ್ ಮೆಂಟ್.

“ಶಿವಣ್ಣ” ನ ಆಶೀರ್ವಾದ, ಬೆಂಬಲದಿಂದ “ಶಿವಲಿಂಗ” ಚಿತ್ರದ ಪ್ರೀಮಿಯರ್ ಶೊ ಇಂಗ್ಲೆಂಡಿನಲ್ಲಿ,… ಆಗ ಶುರುವಾಗಿದ್ದು ಈ “ವಿಷನ್‌ನೈರ್ ಎಂಟರ್ ಟೈನ್ ಮೆಂಟ್ “.

ಮಾತಿಗೆ ತಕ್ಕಂತೆ ಶಿವಣ್ಣ ತಮ್ಮ ಚಿತ್ರವಾದ ಶಿವಲಿಂಗ ದ ಪ್ರೀಮಿಯರ್ ಶೊ ಇಂಗ್ಲೆಂಡಿನಲ್ಲಿ ಹಮ್ಮಿಕೊಳ್ಳಲು ಒಪ್ಪಿದರು. ಶಿವಣ್ಣನ ಆಶೀರ್ವಾದದಿಂದ, ಪ್ರಾರಂಭವಾದ ವಿಜನೈರ್ ಎಂಟರ್ ಟೈನ್ ಮೆಂಟ್ ನ ಕನಸಿನ ಮೊದಲ ಹೆಜ್ಜೆಯಾಗಿ ಶಿವಲಿಂಗ ಚಿತ್ರಕ್ಕೆ ದೊರೆತ ಭವ್ಯವಾದ ಪ್ರತಿಕ್ರಿಯೆ ಬಳಿಕ ಗೊಲ್ಡನ್ ಸ್ಟಾರ್ ಗಣೇಶ್ ಅಭಿನಯದ ಜ಼ೂಮ್, ಗೋಧಿ ಬಣ್ಣ ಸಾಧಾರಣ ಮೈಕಟ್ಟು, ನೀರ್ ದೋಸೆ, ದೊಡ್ಮನೆ ಹುಡುಗ & ಉರ್ವಿ ಚಿತ್ರ ಕೂಡ ಅದ್ಧೂರಿಯಾಗಿ ಬಿಡುಗಡೆಯಾಯಿತು. ಒಂದಿಷ್ಟು ಹಾಲಿವುಡ್ ಬಾಲಿವುಡ್ ಮಂದಿಯನ್ನೂ ಶ್ಯಾಶ್ ಅತಿಥಿಯಾಗಿ ಕರೆಸಿದರು. ಹೀಗೆ ಚಿತ್ರಗಳನ್ನು ಇಂಗ್ಲೆಂಡಿನಲ್ಲಿ ಮತ್ತು ಕೆಲ ಯೂರೋಪ್ ರಾಷ್ಟ್ರಗಳಲ್ಲಿ ಬಿಡುಗಡೆ ಮಾಡುವಲ್ಲಿ ಯಶಸ್ವಿಯಾಯಿತು. ಎಂಥೆಂಥ ನಟರನ್ನು ನೋಡಿದ್ದೇನೆ, ಶಿವಣ್ಣರಂಥ ಒಬ್ಬರನ್ನೂ ಕಂಡಿಲ್ಲ. ಚಿಕ್ಕ ಸಾಧನೆಗೇ ಬಲೂನಿನಂದ ಊದಿಕೊಂಡವರು ಶಿವಣ್ಣನನ್ನು ನೋಡಿ ಕಲಿಯಬೇಕು  ಎಂಬ ಮಾತು ಶ್ಯಾಶ್ ರದ್ದು. ತುಂಬಾ ಕನ್ನಡಿಗರಿಗೆ ಹೊರ ದೇಶದಲ್ಲಿ ಕನ್ನಡ ಚಿತ್ರಗಳನ್ನು ನೋಡುವ ಆಸೆಯೇನೋ ಇರುತ್ತದೆ. ಆದರೆ ಸಲೀಸಾಗಿ ನೋಡುವ ಅವಕಾಶ ಸಿಗುವುದಿಲ್ಲ. ಅಮೇರಿಕಾದಲ್ಲಿ ಒಂದು ಒಳ್ಳೆಯ ನೆಟ್ ವರ್ಕ್ ಇರುವುದರಿಂದ ಅಲ್ಲಿ ಇಂಥ ಕೆಲಸ ಸುಗಮವಾದರೂ ಇಂಗ್ಲೆಂಡಿನಂಥ ರಾಷ್ಟ್ರದಲ್ಲಿ ಇಂಥ ಕೊರತೆಯೊಂದನ್ನು ವಿಜನೈರ್ ಎಂಟರ್ ಟೈನ್ ಮೆಂಟ್ ತಂಡ ಕಡಿಮೆ ಮಾಡುತ್ತಿದೆ.

ಕನ್ನಡ ನಟರನ್ನೂ, ಸಾಹಿತ್ಯವಲಯದಿಂದ ಮೇರು ಸಾಹಿತಿಗಳನ್ನೂ ಇಂಗ್ಲೆಂಡಿಗೆ ಕರೆದು ಸನ್ಮಾನಿಸುವ, ಕನ್ನಡಿಗರಿಗೆ ಹೆಮ್ಮೆಯ ಭಾವ ಉಂಟು ಮಾಡುವಂಥ ಕಾರ್ಯಕ್ರಮಗಳನ್ನು ನಡೆಸುವ ಇರಾದೆ ಹೊಂದಿದ್ದಾರೆ, “ವಿಷನ್‌ನೈರ್ ಎಂಟರ್ ಟೈನ್ ಮೆಂಟ್ ” ನ ಶ್ಯಾಶ್ ಕಿರಣ್ ಮತ್ತು ಪೂಜಾ ಶಶಿಕಿರಣ್…!!!!!

ಕನ್ನಡ ಭಾಷೆಯ ಚಿತ್ರಗಳಿಗೆ ಕರ್ನಾಟಕದಲ್ಲೇ ಚಿತ್ರಮಂದಿರ ದೊರಕದ ವಾತಾವರಣ ಸೃಷ್ಟಿಯಾಗಿರುವ ಇಂಥ ಸಮಯದಲ್ಲಿ ಒಂದು ಸಂಸ್ಥೆ ಭಾರತದ ಹೊರಗೆ, ದೂರದ ಇಂಗ್ಲೆಂಡಿನಲ್ಲಿ ಕನ್ನಡ ಸಿನಿಮಾಗಳ ಪ್ರೀಮಿಯರ್ ಶೋ ಗಳನ್ನು ನಡೆಸುತ್ತಿದೆ. ಬೇರೆ ಯಾವ ಭಾಷೆಯ ಸಿನಿಮಾಗೂ ಕಡಿಮೆಯಿಲ್ಲದಂತೆ ಅಲ್ಲಿನ ದೊಡ್ಡ ದೊಡ್ಡ ಸಿನಿಮಂದಿರಗಳಲ್ಲಿ ಬೇರೆ ಭಾಷೆಯ ದೊಡ್ಡ ನಟರನ್ನೂ ಅತಿಥಿಗಳಾಗಿ ಕರೆದು ಇಂಥದ್ದೊಂದು ಪ್ರೀಮಿಯರ್ ಶೋಗಳನ್ನು ನಡೆಸುವಾಗ ಸಹಜವಾಗಿಯೇ ಕನ್ನಡ ಭಾಷೆಯ ಚಿತ್ರಗಳಿಗೂ ಒಂದು ಮೌಲ್ಯ ದೊರಕಿದಂತಾಗುತ್ತಿದೆ. ಇಂಥದ್ದೊಂದು ಕೆಲಸ ಪ್ರಾರಂಭವಾಗಿದ್ದು, ನಮ್ಮ ಕನ್ನಡಿಗರಾದ ಶ್ಯಾಶ್ ಕಿರಣ್ ಮತ್ತು ಪೂಜಾ ಶಶಿಕಿರಣ್ ಅದರ ನಿರ್ವಹಣೆ ನೋಡಿಕೊಳ್ಳುತ್ತಿದ್ದಾರೆ.

ಜೊತೆಗೆ ಮುಂದೆಯೂ ಜಗ್ಗೇಶ್, ಯಶ್ ಅಂಥ ನಟರನ್ನೂ, ಸಾಹಿತ್ಯವಲಯದಿಂದ ಜಯಂತ ಕಾಯ್ಕಿಣಿ, ಪ್ರೊ ಸಿದ್ದಲಿಂಗಯ್ಯ, ದೇವನೂರು ಮಹದೇವ ರಂಥ ಮೇರು ಸಾಹಿತಿಗಳನ್ನೂ ಇಂಗ್ಲೆಂಡಿಗೆ ಕರೆದು ಸನ್ಮಾನಿಸುವ, ಕನ್ನಡಿಗರಿಗೆ ಹೆಮ್ಮೆಯ ಭಾವ ಉಂಟು ಮಾಡುವಂಥ ಕಾರ್ಯಕ್ರಮಗಳನ್ನು ನಡೆಸುವ ಇರಾದೆ ಹೊಂದಿದೆ. ಜೊತೆಗೆ ಶ್ಯಾಶ್, ಕನ್ನಡ ಚಿತ್ರರಂಗದವರನ್ನೂ ಇಂಗ್ಲೆಂಡಿನಲ್ಲೂ ಸಿನಿಮಾ ಶೂಟಿಂಗ್ ಮಾಡಿ, ಇಲ್ಲಿನವರ ಬಗ್ಗೆಯೂ ಕಥೆಗಳನ್ನು ಮಾಡಿ ಎಂಬ ಸವಿನಯ ಮನವಿಯನ್ನೂ ಮಾಡಿಕೊಳ್ಳುತ್ತಾರೆ. ಬೇರೆ ಭಾಷೆಗಳಲ್ಲಿ ಇದೆಲ್ಲಾ ಸಾಧ್ಯವಾಗಬಹುದಾದರೆ ಕನ್ನಡದಲ್ಲೂ ಯಾಕಾಗಲ್ಲ ಎಂಬುದು ಅವರ ಪ್ರಶ್ನೆ. ಇದಕ್ಕೆ ಸಹಾಯ ಮಾಡಲು ಬೆಂಬಲಿಸಲು ಕನ್ನಡವರು ಸಿದ್ಧರಿದ್ದಾರೆ ಎಂಬ ಮಾತನ್ನು ಅವರು ಎಲ್ಲಾ ಸಿನಿ ನಿರ್ಮಾಪಕರಿಗೆ ನಿರ್ದೇಶಕರಿಗೆ ನೇರವಾಗಿಯೇ ಹೇಳಿದ್ದಾರೆ.

ಕ್ರಿಕೆಟ್‌ನ ನೆಲೆಯಾದ ಲಾರ್ಡ್ಸ್‌ನಲ್ಲಿ ಪ್ರತಿಭಾವಂತ ಕ್ರಿಕೆಟಿಗ ಮತ್ತು ಬಹುಮುಖ ನಟ ಕಿಚ್ಚಾ ಸುದೀಪ್ ನೇತೃತ್ವದಲ್ಲಿ 18 ನೇ ವಾರ್ಷಿಕ ಕಾರ್ಪೊರೇಟ್ ಕ್ರಿಕೆಟ್ ಚಾಲೆಂಜ್ ಗೆದ್ದ ತಂಡ ” ವಿಷನ್‌ನೈರ್ ಎಂಟರ್ ಟೈನ್ ಮೆಂಟ್ ..!!!!

ಅತ್ಯಂತ ಪ್ರತಿಭಾವಂತ ಕ್ರಿಕೆಟಿಗ ಮತ್ತು ಬಹುಮುಖ ನಟ ಶ್ರೀ ಸುದೀಪ್ (ಕಿಚ್ಚಾ ಸುದೀಪ್) ನೇತೃತ್ವದಲ್ಲಿ 18 ನೇ ವಾರ್ಷಿಕ ಕಾರ್ಪೊರೇಟ್ ಕ್ರಿಕೆಟ್ ಚಾಲೆಂಜ್ ಗೆದ್ದ ವಿಷನ್‌ನೈರ್ ತಂಡ, ಕ್ರಿಕೆಟ್‌ನ ನೆಲೆಯಾದ ಲಾರ್ಡ್ಸ್‌ನಲ್ಲಿ ತಮ್ಮ ಮೌಲ್ಯಯುತ ಗ್ರಾಹಕರು ಮತ್ತು ಸಹೋದ್ಯೋಗಿಗಳಿಗೆ ಇದು ವಿಶೇಷ ಪಂದ್ಯಾವಳಿ. ಆಟದ ಸ್ಪಿರಿಟ್‌ಗಾಗಿ ಪ್ರಮಾಣಿತ-ಧಾರಕನೊಂದಿಗೆ ಸಂಬಂಧ ಹೊಂದಿರುವುದು ನಮಗೆ ದೊಡ್ಡ ಭಾಗ್ಯವಾಗಿದೆ. ಹಿಂದಿನ ಮತ್ತು ಇಂದಿನ ಕೆಲವು ಪ್ರಮುಖ ಆಟಗಾರರು ಮತ್ತು ಅಂತರರಾಷ್ಟ್ರೀಯ ಕ್ರಿಕೆಟಿಗರು ಮಾರ್ಕ್ ರಾಂಪ್ರಕೇಶ್, ಅಲೆಕ್ಸ್ ಟ್ಯೂಡರ್, ಡೆವೊನ್ ಮಾಲ್ಕಾಮ್, ಓವೈಸ್ ಷಾ, ಸೈಮನ್ ಜೋನ್ಸ್, ಸಾಜಿದ್ ಮಹಮೂದ್, ಮ್ಯಾಥ್ಯೂ ಹೊಗಾರ್ಡ್ ಅಂತರರಾಷ್ಟ್ರೀಯ ಕ್ರಿಕೆಟಿಗರೊಂದಿಗೆ ಆಡಿದ್ದೇವೆ ಮತ್ತು ನಾವು ರೋಮಾಂಚನಗೊಂಡಿದ್ದೇವೆ. ಕ್ರಿಕೆಟ್ ಕಾಶಿಯಲ್ಲಿ ಈ ಮೈಲಿಗಲ್ಲು ಸಾಧಿಸಲು ನಮಗೆ ಬೆಂಬಲ ನೀಡಿದ ಎಲ್ಲ ಪ್ರಾಯೋಜಕರು / ಪಾಲುದಾರರಿಗೆ ನಾನು ಧನ್ಯವಾದಗಳನ್ನು ಸಮರ್ಪಿಸುತ್ತೇವೆ0ದು ಶ್ಯಾಶ್ ಹೇಳಿದರು.

ನಮ್ಮ ಸೂಪರ್ ಸ್ಟಾರ್ಸ್ ಗೂ ಶ್ಯಾಶ್ ಬೆಂಬಲ …!!!!

ಕೊನೆಯ ಪಕ್ಷ ಕನ್ನಡಿಗರಿಗೆ ಕನ್ನಡದ ಬಗ್ಗೆ ಹೆಮ್ಮೆಯಿರಲಿ ಅಂತ ಬಯಸುವ ಶ್ಯಾಶ್, ಅದಕ್ಕಾಗಿಯೇ ದೂರದ ಊರಾದ ಇಂಗ್ಲೆಂಡಿನಲ್ಲಿ ಏನೇನೋ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುತ್ತಾರೆ. ಆ ಕಾರ್ಯಕ್ರಮಕ್ಕೆ ಬೇರೆ ಭಾಷೆಯ ಜನಪ್ರಿಯರಾದವರನ್ನೂ ಕರೆ ತರುತ್ತಾರೆ. ಹೀಗೆ ಕನ್ನಡವನ್ನು ದೊಡ್ಡ ಮಟ್ಟದಲ್ಲಿ ಕಾಣಬೇಕೆಂಬ ಕನಸು ಹೊತ್ತಿರುವ ಶ್ಯಾಶ್ ಕಿರಣ್, ನಮ್ಮ ಸೂಪರ್ ಸ್ಟಾರ್ಸ್ ಪತ್ರಿಕೆ ಇಲ್ಲಿ ಬಿಡುಗಡೆಯಾಗುತ್ತಿದೆ ಎಂದು ಅರಿವಾದೊಡನೆ, ಈ ಪತ್ರಿಕೆ ಇಂಗ್ಲೆಂಡಿನಲ್ಲೂ ಬಿಡುಗಡೆ ಮಾಡೋಣ ಎಂಬ ಉತ್ಸಾಹ ತೋರಿದರು. ಕ್ರಿಕೆಟ್ ಕಾಶಿಯೆಂದೇ ಜನಪ್ರಿಯವಾಗಿರುವ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಇಂಗ್ಲೆಂಡಿನ ವೇಗದ ಬೌಲರ್, ಡೇವನ್ ಮಾಲ್ಕಂ ಕೈಯಿಂದ ನಮ್ಮ ಸೂಪರ್ ಸ್ಟಾರ್ಸ್ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ಇಂಥದ್ದೊಂದು ಅದ್ಧೂರಿ ಬಿಡುಗಡೆ ಸಿನಿ ಪತ್ರಿಕೆಗಳಲ್ಲಾಗಿರುವುದು ಇದೇ ಮೊದಲು. ಅದಕ್ಕೆ ನಮ್ಮ ಸೂಪರ್ ಸ್ಟಾರ್ಸ್ ತಂಡ ಶ್ಯಾಶ್ ಕಿರಣ್ ಅವರಿಗೆ ಧನ್ಯವಾದ ಹೇಳುತ್ತೇವೆ. ಹೀಗೆ ಮುಂದೆಯೂ ಚಿತ್ರಗಳ ಬಿಡುಗಡೆಗೆ ಅಣಿಯಾಗುತ್ತಿರುವ ವಿಜನೈರ್ ಎಂಟರ್ ಟೈನ್ ಮೆಂಟ್ ಸಂಸ್ಥೆಗೆ ಮತ್ತು ಶ್ಯಾಶ್ ಕಿರಣ್ ರವರಿಗೆ ಒಳ್ಳೆಯದಾಗಲಿ, ಯೂರೋಪ್ ರಾಷ್ಟ್ರಗಳಲ್ಲೂ ಕನ್ನಡ ಭಾಷೆಯು ಮೊಳಗಲಿ, ಕನ್ನಡಿಗರಿಗೆ ಚಪ್ಪಾಳೆಗಳು ಬರಲಿ ಎಂಬುದು ನಮ್ಮ ಸದಾಶಯ.

SPECIAL MOMENTS…!!!!!

Leave a Comment