ಸದಾ ಹೊಸತನದ ಚಿತ್ರಗಳ ಮೂಲಕ ಗಮನ ಸೆಳೆಯುವ ಅಭಿನಯ ಚತುರ ನಟ ‘ರಮೇಶ್ ಅರವಿಂದ್’ ರವರ ನಿರ್ದೇಶನದ “100” ಚಿತ್ರಕ್ಕೆ ಪ್ರೇಕ್ಷಕರು ಫುಲ್ ಫಿದಾ ಆಗಿದ್ದಾರೆ…!!!

Share

ಕ್ರಿಯಾಶೀಲ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ನಟ ‘ರಮೇಶ್ ಅರವಿಂದ್’

100 ಡೇಸ್ ಸಿನಿಮಾಗಳಿಗೆ ಹೆಸರುವಾಸಿಯಾದ ನಟ ರಮೇಶ್ ಅರವಿಂದ್. ಸದಾ ಕಾಲವೂ ಒಂದಿಲ್ಲೊಂದು ಹೊಸತನದ ಚಿತ್ರಗಳ ಮೂಲಕ ಗಮನ ಸೆಳೆಯುವ ಅಭಿನಯ ಚತುರ ನಟ ರಮೇಶ್ ಅರವಿಂದ್ ರವರ ನಿರ್ದೇಶನ ಹಾಗೂ ಅದ್ಭುತ ನಟನೆಯ ಚಿತ್ರಕ್ಕೆ ಪ್ರೇಕ್ಷಕರು ಫುಲ್ ಫಿದಾ ಆಗಿದ್ದಾರೆ. 100 ಚಿತ್ರ ಸೈಬರ್ ಕ್ರೈಂ ಮೇಲೆ ಸಣ್ಣದೊಂದು ಬೆಳಕು, ಒಂದು ಕುಟುಂಬ, ಭಾವನೆ, ಅದರ ಸಂಘರ್ಷಗಳ ಬಗ್ಗೆ ಇದೆ.  ಕಣ್ಣಿಗೆ ಕಾಣಿಸದೇ ಇರುವ ಜಗತ್ತು ನಮ್ಮನ್ನು ಹೇಗೆ ಆಳುತ್ತದೆ ಎಂಬುದನ್ನು ರಮೇಶ್ ಅರವಿಂದ್ ನಿರಾಳವಾಗಿ ಕೂತು ನೋಡುವಂತೆ ಚಿತ್ರಿಸಿದ್ದಾರೆ. ಯಾವುದೇ  ತಂತ್ರಜ್ಞಾನದ ಮೂಲಕ ಏನೇನೆಲ್ಲಾ ಮಾಡಬಹುದು ಅನ್ನುವುದನ್ನು ನೋಡಿದರೆ ಗಾಬರಿಯಾಗುತ್ತದೆ. ಆ ಗಾಬರಿಯನ್ನು ಆತಂಕವನ್ನು ದಾಟಿಸುವಲ್ಲಿ ನಿರ್ದೇಶಕ ರಮೇಶ್ ಅರವಿಂದ್ ಸಫಲರಾಗಿದ್ದಾರೆ. 

ಕುಟುಂಬ ಸಮೇತರಾಗಿ ನೋಡಬಹುದಾದ ಸಿನಿಮಾ 100

100, ಸೈಬರ್ ಕ್ರೈಮ್ ಆಧಾರಿತ ವಿಷಯವಾಗಿದೆ. ರಮೇಶ್ ಅರವಿಂದ್ ಅವರು ಪೊಲೀಸ್ ಅಧಿಕಾರಿಯಾಗಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪುಷ್ಪಕ ವಿಮಾನದ ನಂತರ ಎರಡನೇ ಬಾರಿಗೆ ನಟ ಮತ್ತು ನಿರ್ದೇಶಕ ರಮೇಶ್ ಅರವಿಂದ್ ರೊಂದಿಗೆ ತೆರೆ ಹಂಚಿಕೊಳ್ಳುತ್ತಿರುವ ರಚಿತಾ ರಾಮ್, ರಮೇಶ್ ಅವರ ಸಹೋದರಿಯಾಗಿ ನಟಿಸಿದ್ದಾರೆ. ರಮೇಶ್, ರಚಿತಾರಾಮ್, ಪೂರ್ಣ ತಮ್ಮ ಪಾತ್ರವೇ ಆಗಿಬಿಟ್ಟಿದ್ದಾರೆ. ಗಂಭೀರವಾಗಿ ಸಿನಿಮಾ ಸಾಗುತ್ತಿರುವಾಗ ನೋಡುಗನನ್ನು ಹಗುರಗೊಳಿಸುವುದು ಪ್ರಕಾಶ್ ಬೆಳವಾಡಿ ಮತ್ತು ಶೋಭರಾಜ್. ಇವರಿಬ್ಬರ ನಟನೆ ನಿರಾಳವಾಗುವಂತೆ ಮಾಡುತ್ತದೆ.

‘ತಿರುಟ್ಟು ಪಯಲೆ 2’ ಎಂಬ ತಮಿಳು ಸಿನಿಮಾದಿಂದ ಸ್ಫೂರ್ತಿ ಪಡೆದಿರುವ ಈ ಸಿನಿಮಾ ಕನ್ನಡಕ್ಕೆ ಹೇಗೆ ಬೇಕೋ ಹಾಗೆ ರೂಪಿಸಿದ್ದಾರೆ. 

ಈ ಸಿನಿಮಾವನ್ನು ನಿರ್ದೇಶಕ ರಮೇಶ್ ಅರವಿಂದ್ ನಿಭಾಯಿಸಿದ ರೀತಿ ಸೊಗಸಾಗಿದೆ. ‘ತಿರುಟ್ಟು ಪಯಲೆ 2’ ಎಂಬ ತಮಿಳು ಸಿನಿಮಾದಿಂದ ಸ್ಫೂರ್ತಿ ಪಡೆದಿರುವ ಈ ಸಿನಿಮಾ ಕನ್ನಡಕ್ಕೆ ಹೇಗೆ ಬೇಕೋ ಹಾಗೆ ರೂಪಿಸಿದ್ದಾರೆ. ಸೈಬರ್ ಕ್ರೈಂ ಕುರಿತು ಜಾಗೃತಿ ಮೂಡಿಸುವ ಪ್ರಯತ್ನವೂ ಈ ಸಿನಿಮಾದ ಹಿಂದೆ ಇದೆ.

ಅತ್ಯುತ್ತಮ ಸಂದೇಶ ಇರುವ ಚಿತ್ರ 100 : ನಿರ್ಮಾಪಕ ರಮೇಶ್ ರೆಡ್ಡಿ

ಸದಭಿರುಚಿಯ ಸಿನಿಮಾಗಳಿಗೆ ಹೆಸರುವಾಸಿಯಾದ ನಿರ್ಮಾಪಕ ರಮೇಶ್ ರೆಡ್ಡಿ. ಉಪ್ಪು ಹುಳಿ ಖಾರ , ಪಡ್ಡೆ ಹುಲಿ, ನಾತಿ ಚರಾಮಿ, ಗಾಳಿಪಟ2 ಚಿತ್ರಗಳ ನಿರ್ಮಾಪಕ. ಅತ್ಯುತ್ತಮ ಸಂದೇಶ ಇರುವ ಚಿತ್ರವನ್ನು ಮಾಡಿದ ಖುಷಿ ನನ್ನದು, 100 ಯಾವುದೇ ಅತಿರೇಕಗಳಿಲ್ಲದ, ಎಲ್ಲೂ ತುಂಬಾ ಹಿಂಸೆ ಕೊಡದ ಕುಟುಂಬ ಸಮೇತರಾಗಿ ನೋಡಬಹುದಾದ ಸಿನಿಮಾ ಎಂದರು.

ಬಬ್ಲಿಯಾಗಿ ನಟಿಸಿದ್ದಾರೆ ನಟಿ ‘ಶಿಲ್ಪಾ ಶೆಟ್ಟಿ’

100 ಅಂದರೆ ನಾವು ಕೆಲವೊಂದು ಸಮಸ್ಯೆಗೆ ಪೊಲೀಸರ ಮೊರೆ ಹೋಗುತ್ತೇವೆ.  ಅದನ್ನೇ  ಚಿತ್ರದ ಶೀರ್ಷಿಕೆಯಾಗಿಸಿದ್ದಾರೆ ರಮೇಶ್ ಅರವಿಂದ್. 100 ಉತ್ತಮ ಗುಣಮಟ್ಟದ ಹಾಗೂ ಸಾಮಾಜಿಕ ಸಂದೇಶ ಬೀರುವ  ಸದಭಿರುಚಿಯ ಚಿತ್ರ. ಕನ್ನಡ ಹಾಗೂ ತುಳು ಚಿತ್ರರಂಗದಲ್ಲಿ ತಮ್ಮ ಅಭಿನಯದ ಮೂಲಕ ಛಾಪು ಮೂಡಿಸಿದ್ದಾರೆ ಶಿಲ್ಪಾ ಶೆಟ್ಟಿ. 100 ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಬಬ್ಲಿಯಾಗಿ ನಟಿಸಿದ್ದಾರೆ ಉದಯೋನ್ಮುಖ ನಟಿ ಶಿಲ್ಪಾ ಶೆಟ್ಟಿ.

ನಟ ವಿಶ್ವ ಕರ್ಣ 100 ಚಿತ್ರದ ಹೈಲೈಟ್ ಪಾಯಿಂಟ್

ಮೊಟ್ಟ ಮೊದಲ ಬಾರಿಗೆ ಕನ್ನಡದಲ್ಲಿ ಪಾದಾರ್ಪಣೆ ಮಾಡಿರುವ ನಟ ವಿಶ್ವ ಕರ್ಣ 100 ಚಿತ್ರದ ಹೈಲೈಟ್ ಪಾಯಿಂಟ್. ತೆಲುಗು ಚಿತ್ರರಂಗದಲ್ಲಿ ಗುರ್ತಿಸಿಕೊಂಡಿರುವ ನಟ ವಿಶ್ವ ಕರ್ಣ 100 ಚಿತ್ರದಲ್ಲಿ ತಮ್ಮ ಅಭಿನಯದ ಮೂಲಕ ಶಾಕ್ ನೀಡುತ್ತಾರೆ. ತೆಲುಗು ಹಾಗೂ ಇಂಗ್ಲೀಷ್ ನಲ್ಲಿ ಡೈಲಾಗ್ಸ್ , ಕನ್ನಡದಲ್ಲಿ ನಟನೆ . 100 ಚಿತ್ರದಲ್ಲಿ ಹ್ಯಾಕರ್ ಆಗಿ ನಟಿಸಿರುವ ವಿಶ್ವಕರ್ಣ ಬೆರಗು ಹುಟ್ಟಿಸುತ್ತಾರೆ.

Leave a Comment