ಸಖತ್ “ದುಬಾರಿ” ಆದ ಆ್ಯಕ್ಷನ್​ ಪ್ರಿನ್ಸ್​ “ಧ್ರುವ ಸರ್ಜಾ”

Share

ಧ್ರುವ ಸರ್ಜಾ ಹೊಸ ಸಿನಿಮಾ ‘ದುಬಾರಿ’ ಚಿತ್ರದ ಟೈಟಲ್​ ಲಾಂಚ್​ ಹಾಗೂ ಮುಹೂರ್ತ ಇಂದು ಬೆಳಗ್ಗೆ ನವರಂಗ್ ಬಳಿಯಿರುವ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಮೂಹೂರ್ತ ಪೂಜೆ ನೆರವೇರಿತು.

ಈ ಕಾರ್ಯಕ್ರಮದಲ್ಲಿ ಚಿತ್ರಕ್ಕೆ ಶುಭ ಕೋರಲು ದೊಡ್ಡಣ್ಣ, ಧರ್ಮ, ಚಂದನ್​ ಶೆಟ್ಟಿ, ನಿರ್ದೇಶಕ ಭರ್ಜರಿ ಚೇತನ್, ಅಯೋಗ್ಯ ನಿರ್ದೇಶಕ ಮಹೇಶ್ ಕುಮಾರ್ ಹಾಗೂ ನಟ ಪ್ರಥಮ್​ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
ಇಂದು ಚಾಲನೆ ಗೊಂಡಿರುವ ದುಬಾರಿ ಚಿತ್ರತಂಡ ನವೆಂಬರ್​ ಕೊನೇ ವಾರದಲ್ಲಿ ಚಿತ್ರೀಕರಣಕ್ಕೆ ಯೋಜನೆ ಸಿದ್ಧಪಡಿಸಿಕೊಂಡಿದೆ.

ಪೊಗರು’ ಚಿತ್ರದ ನಂತರ ನಿರ್ದೇಶಕ ನಂದಕಿಶೋರ್​ ಹಾಗೂ ಧ್ರುವ ಸರ್ಜಾ ಕಾಂಬಿನೇಷನ್​ನಲ್ಲಿ ಬರ್ತಿರೋ ಎರಡನೇ ಸಿನಿಮಾ ಇದಾಗಿದೆ.

‘ದುಬಾರಿ ಚಿತ್ರದಲ್ಲಿ ಹೊಸ ಅವತಾರದೊಂದಿಗೆ ಆಕ್ಷನ್ ಪ್ರಿನ್ಸ್ ಬರೋದು ಗ್ಯಾರಂಟಿ…!!!! ಚಿತ್ರಕ್ಕೆ ‘ದುಬಾರಿ’ ಅಂತ ಹೆಸರಿಟ್ಟ ಮೇಲೆ ಚಿತ್ರ ದುಬಾರಿ ಆಗೋದ್ರಲ್ಲಿ ಸಂದೇಹವಿಲ್ಲ..! ದುಬಾರಿ ಚಿತ್ರಕ್ಕೆ ಉದಯ್ ಮೆಹ್ತಾ ಬಂಡವಾಳ ಹೂಡುತ್ತಿದ್ದಾರೆ.

ಈ ಹಿಂದೆ ಈ ಸಿನಿಮಾಗೆ ‘ಜಾಂಬವಂತ’ ಅಂತ ನಾಮಕರಣ ಮಾಡೋ ಪ್ಲ್ಯಾನ್​ ಮಾಡಿಕೊಂಡಿತ್ತು ಚಿತ್ರತಂಡ. ಸ್ವಲ್ಪ ರಗಡ್ ಮತ್ತು ಖಡಕ್ ಆಗಿ ಬರೋ ನಿರೀಕ್ಷೆಯಲ್ಲಿ ಟೈಟಲ್​ ಚೇಂಜ್​ ಮಾಡಲಾಗಿದೆ.

Leave a Comment