” ಬೆಂಗಳೂರು ಫ್ಯಾಷನ್ ಸಾಗದಲ್ಲಿ ಮಿಂಚಿದ ಸೆಲೆಬ್ರಿಟಿ ಶೋಸ್ಟಾಪರ್‌ಗಳು “

Share

ನಗರದ ಖಾಸಗಿ ಹೋಟೆಲೊಂದರಲ್ಲಿ ಮಹಾಮಾರಿಯ ಒತ್ತಡದಲ್ಲೂ ಸಾಕಷ್ಟು ಸುರಕ್ಷತಾ ಕ್ರಮಗಳೊಂದಿಗೆ ಜಿನ್ಸಿ ಸತೀಶ್ ರವರ ನೇತೃತ್ವದಲ್ಲಿ  ಫ್ಯಾಷನ್ ಫ್ಲೇಮ್ಸ್ ವತಿಯಿಂದ  ಬೆಂಗಳೂರು ಫ್ಯಾಷನ್ ಸಾಗ ಅದ್ಧೂರಿಯಾಗಿ ನಡೆಯಿತು. 7ಜನ ವಿಶೇಷ ಡಿಸೈನರ್ ಸಂಗ್ರಹದೊಂದಿಗೆ , ನಮ್ಮ ಗ್ರ್ಯಾಂಡ್ ಫಿನಾಲೆ ಡಿಸೈನರ್ ಜೀನ್ ಡಿಸೈನ್ಸ್ ಜೊತೆಗೆ 34 ಮಹಿಳಾ ರೂಪದರ್ಶಿಗಳು ಮತ್ತು 8 ಪುರುಷ ರೂಪದರ್ಶಿಗಳು ಭಾಗವಹಿಸಿ ವೇಷಭೂಷಣಗಳನ್ನು ಪ್ರದರ್ಶಿಸಿದವು.

ಶೋ ಸ್ಟಾಪರ್ ಆಗಿ ಮಿಂಚಿದ ಚಂದನವನದ ತಾರೆ “ಅನು ಅಯ್ಯಪ್ಪ”

ಕರ್ವ , ಕಥಾವಿಚಿತ್ರ ಚಿತ್ರಗಳ ಮುಖಾಂತರ ಮನಗೆದ್ದ ಚಂದನವನದ ನಟಿ ಅನು ಅಯ್ಯಪ್ಪ ಬ್ರೈಡಲ್ ಗೆಟಪ್ ನಲ್ಲಿ ಸಖತ್ ಮಿಂಚಿದರು. ಅಯ್ಯಪ್ಪ ರವರನ್ನು ವರಿಸಿದ ನಂತರ ಮತ್ತೆ ಫ್ಯಾಷನ್ ಶೋ ನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು. ಜೊತೆಗೆ ಪಲ್ಲವಿ ಗೌಡ, ಮೇಘಾಶೆಟ್ಟಿ, ಅನನ್ಯ ಭಟ್, ಪ್ರಿಯಾ ಕುಮಾರ್ , ಅರುಣಾ ಮುಂತಾದ 8 ಸೆಲೆಬ್ರಿಟಿ ಶೋ ಸ್ಟಾಪರ್‌ಗಳು ಈ ಕಾರ್ಯಕ್ರಮದ ಪ್ರಮುಖರಾಗಿದ್ದರು. ಹೊಸ ವಸ್ತ್ರ ವಿನ್ಯಾಸದೊಂದಿಗೆ ಎಲ್ಲಾ ರೂಪದರ್ಶಿಗಳು ರ್ಯಾಂಪ್ ನಲ್ಲಿ ಹೆಜ್ಜೆ ಹಾಕಿದರು.

ಮಾಡೆಲ್  ‘ಪ್ರಿಯಾಂಕ ಸುದರ್ಶನ್ ‘ ಈ ಕಾರ್ಯಕ್ರಮದ ರಾಯಭಾರಿ …!!!!

ಸಾಕಷ್ಟು ಶೋಗಳಲ್ಲಿ ಮಿನುಗುತ್ತಿರುವ ಮಾಡೆಲ್  ‘ಪ್ರಿಯಾಂಕ ಸುದರ್ಶನ್ ‘ ಈ ಕಾರ್ಯಕ್ರಮದ ರಾಯಭಾರಿಯಾಗಿ, ತಮಗೆ ದೊರಕಿದ ಕ್ರೌನ್ ಜೊತೆ ಫೋಸ್ ಕೊಟ್ಟರು. ಆಯೋಜಕರಿಗೆ ಕೃತಜ್ಞತೆ ಸಲ್ಲಿಸಿ ತಮ್ಮ ಖುಷಿಯನ್ನು ಹಂಚಿಕೊಂಡರು. ಇರ್ಫಾನ್ ಬ್ರಾಡ್ವೇಜ್ 360 ಅವರು ನೃತ್ಯ ಸಂಯೋಜಿಸಿದ್ದರು. ಎಚ್‌ವಿ  ಫೋಟೋಗ್ರಫಿ ಮತ್ತು ವೀಡಿಯೋಗ್ರಫಿ ತಂಡವು ಅಧಿಕೃತ ಪಾಲುದಾರರಾಗಿದ್ದರು.

ಉಡುಗೊರೆ ಪ್ರಾಯೋಜಕರು…!!!!!

ಮೇಕ್ ಓವರ್ ನಲ್ಲಿ 5 ಮೇಕಪ್ ತಂಡಗಳು ಭಾಗಿಯಾಗಿದ್ದವು. ಲಾ ಫೆಮಿ, ಎಲಿಸಿಯನ್ ಎಸೆನ್ಷಿಯಲ್ಸ್, ಮಿಸ್ಟಿಕ್ ಗ್ರೀನ್, ಲಿಕಿತ್ ಆರ್ಗನಿಕ್, ಪ್ರಾಚೀನ ವಿಧಾನ್, ಸ್ನ್ಯಾಕ್-ಒ-ಅಹೋಲಿಕ್, ಶೋಭಾ ಫುಡ್ಸ್, ಚೊಕೊಡೈಂಟಿ, ಆಲಾ ಮೋಡ್, ಪ್ರೈಮ್ ಟೈಮ್, ಮನೀಷಾ ಘೋರ್ಪಾಡೆ ಈ ಕಾರ್ಯಕ್ರಮಕ್ಕೆ ಉಡುಗೊರೆ ಪ್ರಾಯೋಜಕರಾಗಿದ್ದರು. ಸ್ಟಾರ್ ಕನ್ನಡ ಚಾನೆಲ್ ತಂಡ ಪ್ರತಿಯೊಬ್ಬರ ವಿಶೇಷ ಸಂದರ್ಶನ ಮಾಡಿ ಕಾರ್ಯಕ್ರಮಕ್ಕೆ ಸಾಥ್ ನೀಡಿತ್ತು.

ಸೆಲೆಬ್ರಿಟಿ ಶೋ ಸ್ಟಾಪರ್‌ ಅನನ್ಯ ಭಟ್
ಸೆಲೆಬ್ರಿಟಿ ಶೋ ಸ್ಟಾಪರ್‌ ಪಲ್ಲವಿ ಗೌಡ
ಸ್ಟಾರ್ ಕನ್ನಡ ಚಾನೆಲ್ ನ ನಿರ್ದೇಶಕರ ಜೊತೆ ರೂಪದರ್ಶಿಯರು
ಫ್ಯಾಷನ್ ಫ್ಲೇಮ್ಜ್ ನ ಮುಖ್ಯಸ್ಥೆ ಜಿನ್ಸಿ ಸತೀಶ್
ಸೋಹಮ್ ನ ಮುಖ್ಯಸ್ಥರು ಶ್ವೇತಾ ನಂದಾ
ಕಪಿಲ ಹಾಗೂ ಜಯ , ಸಹಕಾರ ನೀಡಿದವರು
ದೀಪ್ತಿ ಚೇತನ್ , ಸಹಕಾರ ನೀಡಿದವರು

Leave a Comment