ವೈ ಎಸ್ ಇಂಟರ್ ನ್ಯಾಷನಲ್ ತಂಡದಿಂದ ಅದ್ದೂರಿ ಫ್ಯಾಷನ್ ವೀಕ್…!!!

Share

ಬೆಂಗಳೂರಿನ ರೆಸಾರ್ಟ್ ನಲ್ಲಿ ಕರೋನಾ ಮಹಾಮಾರಿಯ ಒತ್ತಡದಲ್ಲೂ ಸಾಕಷ್ಟು ಸುರಕ್ಷತಾ ಕ್ರಮಗಳೊಂದಿಗೆ ವೈ ಎಸ್ ಇಂಟರ್ ನ್ಯಾಷನಲ್ ವತಿಯಿಂದ ಅದ್ದೂರಿ ಫ್ಯಾಷನ್ ವೀಕ್ ಆಯೋಜಿಸಲಾಗಿತ್ತು. ಮಿಸ್ಟರ್ ಟೀನ್ ಮಿಸಸ್ ಇಂಟರ್ ನ್ಯಾಷನಲ್ 2020 ರ ಕೊನೆಹಂತದ ಗ್ರ್ಯಾಂಡ್ ಫಿನಾಲೆಗಾಗಿ 60 ಅಭ್ಯರ್ಥಿಗಳನ್ನು ಭಾರತದಾದ್ಯಂತ ಆಡಿಷನ್ ನಡೆಸಿ ಆಯ್ಕೆ ಮಾಡಲಾಗಿತ್ತು.

ಗ್ರ್ಯಾಂಡ್ ಫಿನಾಲೆಗಾಗಿ ಸೆಲೆಬ್ರಿಟಿ ಜ್ಯೂರಿಗಳು…!!!!!!

ಗ್ರ್ಯಾಂಡ್ ಫಿನಾಲೆಗಾಗಿ ಸೆಲೆಬ್ರಿಟಿ ಜ್ಯೂರಿಗಳಾಗಿ ಸೆಲೆಬ್ರಿಟಿ ತೀರ್ಪುಗಾರರು ತಮ್ಮ ಕಾರ್ಯ ನಿರ್ವಹಿಸಿದರು. ಈ ಪಟ್ಟಿಯಲ್ಲಿ ಘಟಾನುಘಟಿಗಳನ್ನೇ ತುಂಬಲಾಗಿತ್ತು. ಅಂತರಾಷ್ಟ್ರೀಯ ರೂಪದರ್ಶಿ ಶ್ವೇತಾ ನಿರಂಜನ್ ಇಲ್ಲಿ ಪ್ರಮುಖ ಆಕರ್ಷಣೆಯಾಗಿದ್ದರು. ಅವರು ಅಂತರರಾಷ್ಟ್ರೀಯ ರೂಪದರ್ಶಿ ಮತ್ತು ಅವಳು ಗೆದ್ದಿದ್ದಾರೆ.ಮತ್ತು ಮಿಸಸ್ ಇಂಡಿಯಾ 2019 ಮಿಸಸ್ ಇಂಡಿಯಾ 2018, ಮಿಸಸ್ ಕರ್ನಾಟಕ 2018 ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡವರು. ಇನ್ನು ಈ ಕಾರ್ಯಕ್ರಮದ ಇನ್ನೊಂದು ಆಕರ್ಷಣೆ ಎಂದರೆ ಸೀಮಾ ನಾಯ್ಡು ಅವರು. ಈಕೆ ಮಿಸಸ್ ಏಷ್ಯಾ ಯುನೈಟೆಡ್ ನೇಶನ್ 2018 ಪ್ರಶಸ್ತಿ ವಿಜೇತೆ. ಮತ್ತಿವರು ಫಿಟ್ ನೆಸ್ ಎಕ್ಸ್ ಪರ್ಟ್ ಮತ್ತು ಸಲೆಬ್ರಿಟಿ ಸ್ಟೈಲಿಷ್ಟ್ ಕೂಡಾ. ಇವರ ಜೊತೆಗೆ ಅಂದಿನ ಕಾರ್ಯಕ್ರಮದ ಶೋ ಸ್ಟಾಪರ್ ಆಗಿ ಕಾಣಿಸಿಕೊಂಡಿದ್ದು ಮಾಸ್ಟರ್ ಓಂ .ಕರ್ನಾಟಕ ಸೂಪರ್ ಕಿಡ್ ಮಾಡೆಲ್ ಪ್ರಶಸ್ತಿ ವಿಜೇತ ಓಂ ಸ್ಯಾಂಡಲ್ ವುಡ್ ನಲ್ಲಿ ಬಾಲ ನಟನಾಗಿಯೂ ಹೆಸರು ಮಾಡಿದ್ದಾರೆ. ಇನ್ನು ಲಿಟಲ್ ಪ್ರಿನ್ಸೆಸ್ ಇಂಡಿಯಾ ಟಾಪ್ ಮಾಡೆಲ್ 2019, ಲಿಟಲ್ ಪ್ರಿನ್ಸೆಸ್ ನ್ಯಾಷನಲ್ ಐಕಾನ್ 2020 ವಿಜೇತರಾದ ಸಿರಿ ಮತ್ತು ಭಾರ್ಗವ್ ಸಿರಿ , ಮಿಸ್ ಕೆಟಗರಿ ದಿವ್ಯ, ಮಿಸಸ್ ಕೆಟಗರಿ ಅನಿತಾ ಬ್ರ್ಯಾಂಡ್ ಅಂಬಾಸಿಡರ್ ಗಳಾಗಿ ಮಿಂಚಿದರು. ಮುಖ್ಯ ಅತಿಥಿಯಾಗಿ ಹಿರಿಯ ಫ್ಯಾಷನ್ ಪರ್ತ್ರಕರ್ತೆ ಮತ್ತು ಬರಹಗಾರ್ತಿ ಶೀಲಾ ಶೆಟ್ಟಿ ಕಾಣಿಸಿಕೊಂಡಿದ್ದರು.

ಮಿಸ್ಟರ್ ಅಂಡ್ ಮಿಸ್, ಮಿಸೆಸ್, ಲಿಟಲ್ ಪ್ರಿನ್ಸ್ ಮತ್ತು ಪ್ರಿನ್ಸೆಸ್ 2020 ಪ್ರಶಸ್ತಿಗಳು

ವೈ ಎಸ್ ಇಂಟರ್ ನ್ಯಾಷನಲ್ ಸಂಸ್ಥೆ ಹೇಳುವ ಪ್ರಕಾರ, ಇಲ್ಲಿ ನಾವು 3 ವರ್ಷದಿಂದ 50 ವರ್ಷ ವಯಸ್ಸಿನವರೆಗೆ ಭಾಗವಹಿಸಿದ ಅನೇಕ ಪ್ರತಿಭೆಗಳನ್ನು ಹೊಂದಿದ್ದೇವೆ ಎಂದು ಘೋಷಿಸಲು ನಾವು ಸಂತೋಷಪಡುತ್ತೇವೆ. ಶ್ರೀಮತಿ ವಿಭಾಗದಲ್ಲಿ 50 ವರ್ಷ ವಯಸ್ಸಿನ ಮಹಿಳೆ ಶ್ರೀಮತಿ ಅಂತರರಾಷ್ಟ್ರೀಯ 2020 ಪ್ರಶಸ್ತಿಯನ್ನು ಗೆದ್ದಿದ್ದಾರೆ. ಈಗಲೂ ಅವರು ತುಂಬಾ ಆಕ್ಟಿವ್ ಆಗಿದ್ದಾರೆ.ಮತ್ತು ಕಾರ್ಯಕ್ರಮದ ಇತರ ಪ್ರಮುಖ ಅಂಶವಾಗಿ ಶ್ರೀಮತಿ ಹೇಮಾ ಮತ್ತು ಮೊಮ್ಮಗಳು ಪ್ರದರ್ಶನದಲ್ಲಿ ಭಾಗವಹಿಸಿದರು.

ಸ್ಪರ್ಧೆಯಲ್ಲಿ 3 ಸುತ್ತುಗಳು !!

ಮೊದಲ ಸುತ್ತಿನ: ರಾಷ್ಟ್ರೀಯ ಥೀಮ್ನಲ್ಲಿ ಭಾಗವಹಿಸುವವರಿಗೆ ನಮ್ಮ ಭಾರತೀಯ ಸಂಸ್ಕೃತಿಯನ್ನು ಅವರ ಸೃಜನಶೀಲತೆಯನ್ನು ಬಳಸಿಕೊಂಡು ಚಿತ್ರಿಸಲು ಕೇಳಲಾಯಿತು, ಅಲ್ಲಿ ಎಲ್ಲಾ ಮಾದರಿಗಳು ಸಂಸ್ಕೃತಿಯನ್ನು ಬಹಳ ಆಕರ್ಷಕವಾಗಿ ಪ್ರತಿನಿಧಿಸಿದವು. ಉದಾಹರಣೆಗಳು: ನವಿಲು, ರಾಷ್ಟ್ರೀಯ ಚಿಹ್ನೆಗಳು, ರೈತ, ರಾಜ, ರಾಣಿ. ಎರಡನೇ ಸುತ್ತು ಟ್ಯಾಲೆಂಟ್ ರೌಂಡ್. ಇಲ್ಲಿ ಆಯಾ ಸ್ಪರ್ಧಿಗಳಿಗೆ ನೃತ್ಯ, ನಟನೆ ಇತ್ಯಾದಿಗಳ ಮೂಲಕ ತಮ್ಮ ಗುಪ್ತ ಪ್ರತಿಭೆಯನ್ನು ಪ್ರದರ್ಶಿಸಲು ಅವರಿಗೆ ಅವಕಾಶ ನೀಡಲಾಯಿತು. ಮೂರನೇದಾಗಿ ಬ್ಯುಸಿನೆಸ್ ಸೂಟ್ ಮತ್ತು ಗೌನ್ ಸುತ್ತಿನಲ್ಲಿ ಮಾಡೆಲ್ ಗಳು ತಮ್ಮನ್ನು ತಾವು ಸಾಬೀತುಪಡಿಸಬೇಕಾಗಿತ್ತು, ಅಂಕಗಳನ್ನು ಗಳಿಸುವ ಪೂರ್ವಾಪೇಕ್ಷಿತ ಅಂಶವೆಂದರೆ ಅವರ ನಡಿಗೆ ಮತ್ತು ವರ್ತನೆ.

ಸ್ಪರ್ಧೆಯ ವಿಜೇತರುಗಳ ಪಟ್ಟಿ ..!!!!!

ಮಿಸ್ಟರ್ ಅಂಡ್ ಮಿಸ್ ಇಂಟರ್ನ್ಯಾಷನಲ್ ವಿನ್ನರ್ 2020
ಮಿಸ್ಟರ್ = ಥಾಮಸ್ ರಾಜ್ ತಮಿಳುನಾಡಿನಿಂದ
ಮಿಸ್ = ದೀನಾ ಚಿಕ್ಕಮ್ಮಂಗಳೂರಿನಿಂದ

ಮಿಸ್ಟರ್ ಅಂಡ್ ಮಿಸ್ ಟೀನ್ ಇಂಟರ್ನ್ಯಾಷನಲ್ ವಿನ್ನರ್ 2020
ಮಿಸ್ ಟೀನ್ = ಮಿತ್ರಾ ಕೊಯಂಬತ್ತೂರಿನಿಂದ
ಮಿಸ್ಟರ್ ಟೀನ್ = ನಿಹಾಲ್ ರಾವಲ್ ಮಂಡ್ಯದಿಂದ

ಲಿಟಲ್ ಪ್ರಿನ್ಸ್ ಮತ್ತು ಪ್ರಿನ್ಸ್ ಅಂತರರಾಷ್ಟ್ರೀಯ ವಿಜೇತ 2020
ವಯಸ್ಸಿನ ವರ್ಗ: 7 ವರ್ಷದಿಂದ 12 ವರ್ಷ
ಲಿಟಲ್ ಪ್ರಿನ್ಸ್: ಬೆಂಗಳೂರಿನಿಂದ ವಿನೀತ್
ಲಿಟಲ್ ಪ್ರಿನ್ಸೆಸ್ : ಆದಿವ್ಯಾ ಗುಪ್ತಾ

ವಯಸ್ಸಿನ ವರ್ಗ: 3 ವರ್ಷದಿಂದ 6 ವರ್ಷ
ಲಿಟಲ್ ಪ್ರಿನ್ಸ್: ರೀತ್
ಲಿಟಲ್ ಪ್ರಿನ್ಸೆಸ್ : ಹಿತಾಕ್ಷಿ ರಾವಲ್

ಮಿಸೆಸ್ ಇಂಟರ್ ನ್ಯಾಷನಲ್ ಅವಾರ್ಡ್ 2020
ಶ್ರೀಮತಿ = ಹೇಮಾ

ಮಾನವೀಯತೆಯ ಹಸ್ತವನ್ನೂ ಚಾಚಿದ ವೈಎಸ್ ಇಂಟರ್ ನ್ಯಾಷನಲ್ ಸಂಸ್ಥೆ.. ‌!!!!

ಇನ್ನು ವೈಎಸ್ ಇಂಟರ್ ನ್ಯಾಷನಲ್ ಸಂಸ್ಥೆ ನಡೆಸಿದ ಈ ಕಾರ್ಯಕ್ರಮ ಕೇವಲ ಮನರಂಜನೆಗೆ ಸೀಮಿತವಾಗದೆ ಮಾನವೀಯತೆಯ ಹಸ್ತವನ್ನೂ ಚಾಚಿತ್ತು. ಈ ಕಾರ್ಯಕ್ರಮದಿಂದ ಬಂದ ಹಣದಲ್ಲಿ ಕರೋನಾ ಕಾರಣಕ್ಕಾಗಿ ಸಂಕಷ್ಟಕ್ಕೆ ಸಿಲುಕಿದ ಸುಮಾರು 20000 ಜನಕ್ಕೆ ಊಟ ಮತ್ತು ಉಚಿತ ಬ್ಲಾಂಕೆಟ್ಗಳನ್ನು ವಿತರಿಸುವ ಕೆಲಸವನ್ನೂ ಸಂಸ್ಥೆ ಮಾಡಿರುವುದು ಶ್ಲಾಘನೀಯ ಕೆಲಸ.

Leave a Comment