ಭಜರಂಗಿ “ಲೋಕಿ” ಸ್ಟೈಲಿಶ್ ಫೋಟೋಶೂಟ್…!!!!!

Share
www.nammasuperstars.com

ಒಳ್ಳೆ ಹೈಟ್, ಒಳ್ಳೆ ಫಿಸಿಕ್ ಯಾವ ಹೀರೋಗೂ ಕಮ್ಮಿ ಇಲ್ಲ ಎಂಬ ಸ್ಟೈಲ್ ಹೊಂದಿರುವ ಲೋಕಿ (ಭಜರಂಗಿ ಲೋಕಿ) ಈ ಫೋಟೋಶೂಟ್ ಸಖತ್ ಸದ್ದು ಮಾಡ್ತಿದೆ. ‘ಭಜರಂಗಿ’ ಸಿನಿಮಾ ಮೂಲಕ ಕನ್ನಡಿಗರ ಮನಸ್ಸಿನಲ್ಲಿ ಜಾಗ ಪಡೆದು ಪ್ರತಿಭಾನ್ವಿತ ನಟ ಸೌರವ್ ಲೋಕೇಶ್ (ಭಜರಂಗಿ ಲೋಕಿ) ಈಗ ಸ್ಟೈಲಿಶ್ ಫೋಟೋಶೂಟ್ ಮೂಲಕ ಸದ್ದು ಮಾಡ್ತಿದ್ದಾರೆ. ಈಗಿನ ಟ್ರೆಂಡ್ನಲ್ಲಿ ಹೀರೋ ಮತ್ತು ಹೀರೋಯಿನ್ ಗಳು ಫೋಟೋಶೂಟ್ ಮಾಡಿಸುವುದು ಸಹಜ. ಆದರೆ, ವಿಲನ್ ಪಾತ್ರದಲ್ಲಿ ಗುರುತಿಸಿಕೊಂಡಿರುವ ನಟ ಫೋಟೋಶೂಟ್ ಮೊರೆಹೋಗುವುದು ಅಪರೂಪ.

ವಿಲನ್ ಗಳು ಫೋಟೋಶೂಟ್ ಮಾಡಿಸುವುದು ಬೇರೆ ಇಂಡಸ್ಟ್ರಿಯಲ್ಲಿ ಕಾಣಬಹುದು. ಆದರೆ, ಈ ಟ್ರೆಂಡ್ ಕನ್ನಡದಲ್ಲಿ ಅಪರೂಪ….!!!

ವಿಲನ್ ಗಳು ಫೋಟೋಶೂಟ್ ಮಾಡಿಸುವುದು ಬೇರೆ ಇಂಡಸ್ಟ್ರಿಯಲ್ಲಿ ಕಾಣಬಹುದು. ಆದರೆ, ಈ ಟ್ರೆಂಡ್ ಕನ್ನಡದಲ್ಲಿ ಅಪರೂಪ. ಎಲ್ಲೋ ಒಬ್ಬೊಬ್ಬರು ಪ್ರಯತ್ನಿಸಿರಬಹುದು. ಇದೀಗ, ಸೌರವ್ ಲೋಕಿ ಇಂತಹ ಪ್ರಯತ್ನಕ್ಕೆ ಕೈಹಾಕಿ ಯಶಸ್ಸು ಕಂಡಿದ್ದಾರೆ. ಅದ್ಧೂರಿಯಾಗಿ ಫೋಟೋಶೂಟ್ ಮಾಡಿ ಗಮನ ಸೆಳೆಯುತ್ತಿದ್ದಾರೆ.

ಕನ್ನಡದ ಡಿಸೈನರ್ ‘ಪವಿತ್ರಾ ಗೌಡ’ ಅವರ ನಿರ್ದೇಶನದಲ್ಲಿ ಈ ಫೋಟೋಶೂಟ್ ಆಗಿದೆ…!!!!

ಕನ್ನಡದ ಡಿಸೈನರ್ ಪವಿತ್ರಾ ಗೌಡ ಅವರ ನಿರ್ದೇಶನದಲ್ಲಿ ಈ ಫೋಟೋಶೂಟ್ ಆಗಿದೆ. ಮೂರು ದಿನ ಸಮಯ ತೆಗೆದುಕೊಂಡು ಶೂಟ್ ಮಾಡಲಾಗಿದೆ. ನಾಲ್ಕು ವಿಭಿನ್ನ ಕಾಸ್ಟ್ಯೂಮ್ ಬಳಸಲಾಗಿದೆ. ಲೋಕಿಯ ಈ ಲುಕ್ ನೋಡ್ತಿದ್ರೆ ಮುಂದಿನ ದಿನಗಳಲ್ಲಿ ಸ್ಯಾಂಡಲ್ ವುಡ್ನಲ್ಲಿ ಮತ್ತಷ್ಟು ಚಿತ್ರಗಳನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳುವುದರಲ್ಲಿ ಯಾವುದೇ ಅನುಮಾನ ಇಲ್ಲ.

Leave a Comment