ಯೂಟ್ಯೂಬ್ ಚಾನಲ್ ಆರಂಭಿಸಿದ ದಿಲ್‌ಬರ್ ಬೆಡಗಿ “ನೊರಾ ಫತೇಹಿ “….!

Share

ಟ್ಯಾಲೆಂಟೆಡ್ ಬ್ಯೂಟಿ ನೋರಾ ಫತೇಹಿ ಈಗ ಇಂಟರ್‌ನೆಟ್ ಸೆನ್ಸೆಷನ್ ಎನಿಸಿದ್ದಾಳೆ. ಈ ಮಾದಕ ಡ್ಯಾನರ್ ಫೋಟೋಗಳು ಮತ್ತು ವಿಡಿಯೋಗಳು ಎಲ್ಲರ ಹುಬ್ಬೇರುವಂತೆ ಮಾಡುತ್ತದೆ. ನೋರಾ ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯ. ಇನಸ್ಟಗ್ರಾಂ ಮತ್ತು ಟ್ವಿಟರ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣ ವೇದಿಕೆಯಲ್ಲಿ ಕ್ರಿಯಾಶೀಲಳಾಗಿದ್ದಾಳೆ. ಈ ಬೆಲ್ಲಿ ಡ್ಯಾನ್ಸರ್ ತನ್ನದೇ ಆದ ಯೂ-ಟ್ಯೂಬ್ ಚಾನೆಲ್ ಸಹ ಆರಂಭಿಸಿದ್ದಾಳೆ. ಆಗ್ಗಿಂದಾಗ್ಗೆ ಹೊಸ ವೀಡಿಯೋಗಳು ಮತ್ತು ದೃಶ್ಯ ತುಣುಕುಗಳೊಂದಿಗೆ ಅಭಿಮಾನಿಗಳನ್ನು ರಂಜಿಸುತ್ತಲೇ ಇರುತ್ತಾಳೆ.

ನೋರಾ ಇತ್ತೀಚಿನ ತನ್ನ ವಿಡಿಯೋಬ್ಲಾಗ್‌ನಲ್ಲಿ ಮಜರ್ವಾನ್ ಸಿನಿಮಾದಲ್ಲಿನ ತನ್ನ ಲೇಟೇಸ್ಟ್ ಸಾಂಗ್ ಎಕ್ ತೋ ಕಮ್ ಝಿಂದಗಾನಿ ಹಾಡಿನ ಚಿತ್ರೀಕರಣದ ದೃಶ್ಯಗಳನ್ನು ಫ್ಯಾನ್‌ಗಳು ಮತ್ತು ಫಾಲೋವರ್ ಗಳೊಂದಿಗೆ ಹಂಚಿಕೊAಡಿದ್ದಾಳೆ. ಸತ್ಯಮೇವ ಜಯತೆ ಸಿನಿಮಾದಿ ದಿಲ್‌ಬರ್ ಹಾಡಿನ ಮೂಲಕ ರಸಿಕರ ಹೃದಯ ಗೆದ್ದ ನೋರಾ ಫತೇಹಿ ನಂತರ ಬಾಟ್ಲಾ ಹೌಸ್ ಸಿನಿಮಾದಲ್ಲಿ ಸಾಖಿ ಓ ಸಾಖಿ ಐಟಂ ನಂಬರ್‌ನಲ್ಲೂ ಮಿಂಚಿದಳು. ಸಲ್ಮಾನ್ ಖಾನ್ ಅಭಿಯನದ ಭಾರತ್ ನಲ್ಲೂ ನೋರಾ ನೃತ್ಯವಿದೆ.

Leave a Comment