“ರಾಜು ಜೇಮ್ಸ್ ಬಾಂಡ್” ಅಣ್ಣಾವ್ರ ಜೇಮ್ಸ್ ಬಾಂಡ್ ಸಿನಿಮಾಗಳ ಆರಾಧಕ…!

Share

ಕರ್ಮ ಬ್ರದರ್ಸ್ ಪ್ರೊಡಕ್ಷನ್ ಅಡಿಯಲ್ಲಿ ಚಾಮುಂಡೇಶ್ವರಿ ಸ್ಟುಡಿಯೋ ಆವರಣದಲ್ಲಿ `ರಾಜು ಜೇಮ್ಸ್ ಬಾಂಡ್’ ಚಿತ್ರವನ್ನು ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಕ್ಲಾಪ್ ಮಾಡುವುದರ ಮುಖಾಂತರ ಹಾಗೂ ಜಿ ಟಿ ದೇವೇಗೌಡ ಅವರು ಕ್ಯಾಮರಾ ಸ್ವಿಚ್ ಆನ್ ಮಾಡುವುದರ ಮುಖಾಂತರ ಸೆಟ್ಟೇರಿತು.

 

ಗುರುನಂದನ್ ಜೊತೆ ನಾಯಕಿ ಆಗಿ ಮೃದುಲ

ರಾಜು ಹೆಸರಿಗೆ ಬ್ರಾಂಡ್ ಆಗಿರುವ ಗುರುನಂದನ್ ಈಗ ಜೇಮ್ಸ್ ಬಾಂಡ್ ಅದು ದೀಪಕ್ ಮಧುವನಹಳ್ಳಿ ನಿರ್ದೇಶನದಲ್ಲಿ. ರಾಜು ಜೇಮ್ಸ್ ಬಾಂಡ್ ಅಣ್ಣಾವ್ರ ಜೇಮ್ಸ್ ಬಾಂಡ್ ಸಿನಿಮಾಗಳ ಆರಾಧಕ. ಈತ ತನ್ನ ಜೀವನದಲ್ಲಿ ಹಾಗೂ ಸಾಮಾಜಿಕ ಜೀವನದಲ್ಲಿ ಹೇಗೆ ಬಾಂಡ್ ಶೈಲಿ ಬಳಸಿ ಕಾರ್ಯ ನಿರ್ವಹಿಸುತ್ತಾನೆ ಎಂಬುದು ಕಥಾ ಹಂದರ. 

 

ಕಿರಣ್ ಬರ್ಥೂರ್ (ಕೆನಡಾ) ಮಂಜುನಾಥ್ ವಿಶ್ವಕರ್ಮ (ಲಂಡನ್) ರವರ ನಿರ್ಮಾಣದ ಈ ಚಿತ್ರಕ್ಕೆ ಚಿತ್ರಕಥೆ ಹಾಗೂ ಸಂಭಾಷಣೆ ಜಗದೀಶ್ ನಡನಲ್ಲಿ, ಸಹ ನಿರ್ದೇಶನ ಶಿವರಾಜ್, ಛಾಯಾಗ್ರಹಣ ಮನೋಹರ್ ಜೋಷಿ, ಸಂಕಲನ ಅಕ್ಷಯ್ ಪಿ ರಾವ್ ಹಾಗೂ ಸಂಗೀತ ಅನೂಪ್ ಸೀಳಿನ್ ಜೆ ರವರದ್ದು. ಕಾರ್ಯಕಾರಿ ನಿರ್ಮಾಪಕರು ಎಲ್ ಎಲ್ ಕೆ ನಾಯ್ಡು. ನಾಯಕ ಗುರುನಂದನ್ ಜೊತೆ ನಾಯಕಿ ಆಗಿ ಮೃದುಲ, ರಂಗಾಯಣ ರಘು, ರವಿಶಂಕರ್, ಸಾಧು ಕೋಕಿಲ, ಚಿಕ್ಕಣ್ಣ, ಸುಂದರ್ ವೀಣ ಹಾಗೂ ಇತರರು ಇದ್ದಾರೆ.

Leave a Comment