
ಪುರಾಣ ಕಥೆಗಳನ್ನು ನೃತ್ಯದ ಮೂಲಕ ಸಾದರ ಪಡಿಸುವ ಕಲೆಯೇ ಭರತನಾಟ್ಯ. ಇದು ಲಯಬದ್ಧವಾಗಿ ಸಂಗೀತಕ್ಕೆ ದೇಹವನ್ನು ಚಲಿಸುವ ಒಂದು ಕಲೆ. ಇಂದ್ರನ ಮನವಿ ಮೇರೆಗೆ ಬ್ರಹ್ಮ ಇದನ್ನು ಐದನೇ ವೇದವಾಗಿ ಸೃಷ್ಟಿ ಮಾಡ್ತಾನೆ. ಮೊದಲ ಬಾರಿಗೆ ಭರತಮುನಿ ನೃತ್ಯ ಪ್ರದರ್ಶನ ನೀಡುತ್ತಾನೆ. ಬ್ರಹ್ಮನ ನೂರು ಗಂಡು ಮಕ್ಕಳಿಂದ ನಾಟ್ಯ ಬೆಳೆಯುತ್ತಾ ಬಂದಿದೆ ಎಂಬ ಪೌರಾಣಿಕೆ ಹಿನ್ನೆಲೆ ಭರತನಾಟ್ಯಕ್ಕಿದೆ. ಭರತನಾಟ್ಯ ಕಲೆ ಉಳಿದೆಲ್ಲಾ ನೃತ್ಯ ಕಲೆಗಳಿಗೊಂದು ಆದರ್ಶ. ಇಂತಹ ಒಂದು ದೈವಿ ಸ್ವರೂಪವಾದ ನೃತ್ಯ ಕಲೆಯನ್ನು ಮೈಗೂಡಿಸಿಕೊಂಡವರು ಡಾ. ಕೆ. ಜಯಲಕ್ಷ್ಮಿಜಿತೇಂದ್ರ. ಇವರು ಮೂಲತಃ ಬೆಂಗಳೂರಿನವರೇ ಆಗಿದ್ದು, ಶ್ರೀಮತಿ ಲಕ್ಷ್ಮಿ ಮತ್ತು ಕೃಷ್ಣಯ್ಯ ದಂಪತಿಯ ಪುತ್ರಿಯಾಗಿದ್ದಾರೆ. ೫ನೇ ವಯಸ್ಸಿನಲ್ಲಿಯೇ ಶ್ರೀ ಶಿವರಾವ್ ಅವರ ಬಳಿ ನೃತ್ಯ ಕಲಿತರು. ಬಳಿಕ ಕೈಶಿಕಿ ನಾಟ್ಯ ವಹಿನಿ, ನಾಟ್ಯ ಕಲಾರತ್ನ ಶ್ರೀಮತಿ ಮಾಲಾ ಶಶಿಕಾಂತ್ ಅವರ ಬಳಿ ನೃತ್ಯ ಕಲಿತಿದ್ದು ಇವರನ್ನ ಪರಿಪೂರ್ಣ ನೃತ್ಯಗಾರ್ತಿಯನ್ನಾಗಿಸಿತು. ಇಷ್ಟೇ ಅಲ್ಲದೆ ಶ್ರೀ ರಾಧಕೃಷ್ಣ ಅವರ ಬಳಿಯೂ ನೃತ್ಯ ತರಬೇತಿಯನ್ನು ಪಡೆದು, ಇಂದು ಕರ್ನಾಟಕದ ಹೆಸರಾಂತ ನೃತ್ಯ ತರಬೇತುಗಾರ್ತಿಯಾಗಿದ್ದಾರೆ.
ನೃತ್ಯದಲ್ಲಿ ಮುದ್ರೆಗಳು, ಭಾರತೀಯ ಯೋಗ, ಮಾರ್ಷಲ್ ಆರ್ಟ್, ಡ್ಯಾನ್ಸ್ ಥೆರಫಿಯನ್ನು ಅಳವಡಿಸಿಕೊಂಡು ಮಾಡಿದ ಸಾಧನೆ ಹಾಗೂ ಕಣ್ಣು ಕಾಣಿಸದ, ಕಿವಿ ಕೇಳದ, ಮಾತು ಬಾರದ ಮಕ್ಕಳಿಗೆ ನೃತ್ಯ ಕಲಿಸುತ್ತಿರುವ ಕರುನಾಡಿನ ಭರತನಾಟ್ಯ ಕ್ಷೇತ್ರದ ‘ಡಾ. ಕೆ. ಜಯಲಕ್ಷ್ಮಿ ಜಿತೇಂದ್ರ’, ರವರನ್ನು “ಸ್ಟಾರ್ ಕನ್ನಡ” ಡಿಜಿಟಲ್ ಚಾನೆಲ್ ನ ನಾಟ್ಯ ರಾಣಿ ಶಾಂತಲಾ ” ಪ್ರಶಸ್ತಿ ೨೦೨೧ರ “ರಾಯಭಾರಿ”ಯಾಗಿ ನೇಮಕ ..!!!!

ಭರತನಾಟ್ಯದ ಜೊತೆಗೆ ಆಧುನಿಕ ನೃತ್ಯವನ್ನು ಕೂಡ ಹೇಳಿಕೊಡುತ್ತಿದ್ದಾರೆ. ಕೈಲಾಸ ಕಲಾಧಾರ ಟ್ಟಸ್ಟ್ನ ಮುಖ್ಯಸ್ಥೆ ಆಗಿರುವುದರ ಜೊತೆಗೆ ವಿಷ್ಣು ದುರ್ಗಾ ದೇಗುಲದ ಆಡಳಿತ ಮಂಡಳಿಯಲ್ಲಿ ಕಾರ್ಯದರ್ಶಿಯಾಗಿದ್ದಾರೆ. ಬೃಂದಾವನ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾಗಿದ್ದಾರೆ. ಮೀಡಿಯಾ ಅಸೋಸಿಯೇಷನ್ ಹಾಗೂ ‘ಕರ್ನಾಟಕ ಭರತಗಮ ಪ್ರತಿಷ್ಠಾನದ ಸದಸ್ಯೆಯಾಗಿದ್ದಾರೆ. ಕನ್ನಡ ಸೇನೆಯ ಅಧ್ಯಕ್ಷೆಯಾಗಿದ್ದಾರೆ. ಇವರು ಅಮೆರಿಕದ ಅಕ್ಕ ಸಮ್ಮೇಳನ ಸೇರಿದಂತೆ ಹಲವು ದೇಶಗಳಲ್ಲಿ ನೃತ್ಯ ಪ್ರದರ್ಶನ ನೀಡಿ ಹೆಸರುವಾಸಿಯಾಗಿದ್ದಾರೆ. ನೃತ್ಯದಲ್ಲಿ ಮುದ್ರೆಗಳು, ಭಾರತೀಯ ಯೋಗ, ಮಾರ್ಷಲ್ ಆರ್ಟ್, ಡ್ಯಾನ್ಸ್ ಥೆರಫಿಯನ್ನು ಅಳವಡಿಸಿಕೊಂಡು ಮಾಡಿದ ಸಾಧನೆ ಹಾಗೂ ಕಣ್ಣು ಕಾಣಿಸದ, ಕಿವಿ ಕೇಳದ, ಮಾತು ಬಾರದ ಮಕ್ಕಳಿಗೆ ನೃತ್ಯ ಕಲಿಸುತ್ತಿರುವ ಸೇವೆಯನ್ನು ಪರಿಗಣಿಸಿ ” “ಸ್ಟಾರ್ ಕನ್ನಡ” ಡಿಜಿಟಲ್ ಚಾನೆಲ್ ನ ಹೆಮ್ಮೆಯ ಕಾಣಿಕೆ ” ನಾಟ್ಯ ರಾಣಿ ಶಾಂತಲಾ ” ಪ್ರಶಸ್ತಿ ೨೦೨೧ರ “ರಾಯಭಾರಿ” ಯಾಗಿ ಗೌರವಿಸಿದೆ. ಇಂಥ ಶ್ರೇಷ್ಠ ಕಲಾವಿದೆ ತಮ್ಮ ನೃತ್ಯ ಜೀವನದ ಒಂದಷ್ಟು ಸ್ವಾರಸ್ಯಕರ ವಿಚಾರಗಳನ್ನ ಹಂಚಿಕೊಳ್ಳುವುದು ಹೀಗೆ,
ನೀವು ಬಾಲ್ಯದಲ್ಲಿ ಡ್ಯಾನ್ಸ್ ಕಲಿತ ಅನುಭವ ಹೇಗಿತ್ತು..?

ನಾನು ಹುಟ್ಟುವುದಕ್ಕೂ ಮೊದಲೇ ನನ್ನ ಅಮ್ಮ ತನಗೆ ಮಗಳು ಆದರೆ ಆಕೆಯನ್ನು ಭರತನಾಟ್ಯ ಕಲಾವಿದೆಯನ್ನಾಗಿ ಮಾಡಬೇಕು ಅಂತ ಕನಸು ಕಂಡಿದ್ದರಂತೆ. ಅದರಂತೆ ನನ್ನನ್ನು ಡ್ಯಾನ್ಸ್ ತರಗತಿಗೆ ಕಳುಹಿಸಿ ನಾನು ನೃತ್ಯ ಕಲಿತುಕೊಳ್ಳಲು ನೆರವಾದರು. ಇದರ ಜೊತೆಗೆ ಅಪ್ಪಾಜಿ ಭಜನೆ ಪದಗಳನ್ನ ಹಾಡುವಾಗ ನಾನು ಹೆಜ್ಜೆ ಹಾಕುತ್ತಿದ್ದೆ. ಹೀಗಾಗಿ ಭರತನಾಟ್ಯ ಕಲೆ ಮೇಲೆ ನನ್ನ ಆಸಕ್ತಿ ಹೆಚ್ಚುತ್ತಾ ಹೋಯಿತು. ಇದೆಲ್ಲದಕ್ಕಿಂತ ಹೆಚ್ಚಿನದಾಗಿ ನನ್ನ ಗುರು, ನನ್ನ ಬಾಳಿನ ಆರಾಧ್ಯ ದೈವ ಡಾ. ಮಾಲಾ ಶಶಿಕಾಂತ್ ಅವರ ಬಳಿ ನೃತ್ಯ ಕಲಿತದ್ದು ಭರತನಾಟ್ಯ ಕ್ಷೇತ್ರದಲ್ಲಿ ಒಂದು ದೊಡ್ಡ ಟರ್ನಿಂಗ್ ಪಾಯಿಂಟ್ ಆಯಿತು.
ನೀವೊಬ್ಬ ಶಿಕ್ಷಕಿ ಆಗಬೇಕು ಅಂತ ಯಾವಾಗ ಅನಿಸಿತು..?

ನಾನು ಚಿಕ್ಕವಳಿದ್ದಾಗ ಡ್ಯಾನ್ಸ್ ಕ್ಲಾಸ್‌ನಲ್ಲಿ ಚಿಕ್ಕ ತಪ್ಪು ಮಾಡಿದರೆ ಸಾಕು ತುಂಬಾ ಹೊಡೆಯುತ್ತಿದ್ದರು. ಮನೆಯಲ್ಲಿ ಕೂಡ ಅಪ್ಪ-ಅಮ್ಮ ಗುರುಗಳು ನಿನ್ನ ಒಳ್ಳೆಯದಕ್ಕೆ ಹೇಳುತ್ತಾರೆ ಮನಸು ನೋಯಿಸಿಕೊಳ್ಳಬೇಡ ಅಂತಿದ್ರು. ಆಗ ನಾನು ನಾನೇನಾದ್ರು ಮುಂದೆ ಗುರು ಆದರೆ ಮಕ್ಕಳಿಗೆ ಶಿಕ್ಷೆ ಕೊಡಬಾರದು, ಪ್ರೀತಿಯಿಂದ ಹೇಳಿಕೊಡಬೇಕು ಅಂತ ಅಂದುಕೊಳ್ಳುತ್ತಿದ್ದೆ. ಅದು ಕ್ರಮೇಣ ನಾನು ಶಿಕ್ಷಕಿಯಾಗಬೇಕು ಎಂಬ ಗುರಿಯನ್ನ ಬಲಗೊಳಿಸುತ್ತಾ ಹೋಯಿತು.
ಕೈಲಾಸ ಕಲಾಧಾರ ಹುಟ್ಟಿದ್ದು ಹೇಗೆ..?


ಡ್ಯಾನ್ಸ್ ಕ್ಲಾಸ್‌ಗೆ ಮೊದಲು ಪ್ರದ್ಯುಮ್ನ(ನನ್ನ ಮಗನ ಹೆಸರು) ಅಂತ ಇಟ್ಟಿದ್ದೆ. ಆದರೆ ನಾನು ಯೂನಿವರ್ಸಲ್ ಆಗಿ ಯೋಚನೆ ಮಾಡುವುದರಿಂದ ಈ ಹೆಸರು ನನಗೆ ಅಷ್ಟು ಸಂತೃಪ್ತಿ ಅನಿಸಲಿಲ್ಲ. ನಮ್ಮ ಗುರುಗಳು ಕೂಡ ನೀನು ಶಿವನ ಆರಾಧಿಕಿಯಾಗಿರುವುದರಿಂದ ಕೈಲಾಸದ ಬಗ್ಗೆ ಹೆಸರಿಡು ಅಂತ ಸಲಹೆ ನೀಡಿದರು. ಆಗ ಕೈಲಾಸ ಕಲಾಧಾರೆ ಎಂಬ ಹೆಸರನ್ನು ಇಟ್ಟಿದ್ದೆವು. ಆದರೆ ಅದರ ಒಳ ಅರ್ಥ ನೋಡಿದಾಗ ಕೈಲಾಸದಿಂದ ಕಲೆ ಬಂದಿದೆ, ಕಲೆಯನ್ನು ಆರಾಧಿಸುವವನು ಕೈಲಾಸದಲ್ಲಿ ಇದ್ದಾನೆ ಎಂಬುವುದನ್ನು ಸೂಚಿಸುತ್ತಿತ್ತು. ಹೀಗಾಗಿ ಅಂತಿಮವಾಗಿ ಕೈಲಾಸ ಕಲಾಧಾರ ಆಯಿತು.
ವಿಕಲಚೇತನ ಮಕ್ಕಳಿಗೆ ಡ್ಯಾನ್ಸ್ ಕಲಿಸಿಕೊಡಬೇಕು ಅಂತ ಅನಿಸಿದ್ದು ಹೇಗೆ..?

ನಾನು ಚಿಕ್ಕವಳಿದ್ದಾಗಿನಿಂದಲೂ ವಿಕಲಚೇತನ ಮಕ್ಕಳನ್ನ ನೋಡಿಕೊಂಡು ಬಂದಿದ್ದೇನೆ. ಅವರು ಇನ್ನೊಬ್ಬರನ್ನು ಆಶ್ರಯಿಸದೇ ಸ್ವ-ಸಾಮರ್ಥ್ಯದಿಂದ ಮುಂದೆ ಬರುವಂತೆ ತರಬೇತುಗೊಳಿಸಬೇಕು ಎಂದುಕೊಳ್ಳುತ್ತಿದ್ದೆ. ಆ ಶ್ರಮದ ಫಲವಾಗಿ ಇಂದು ವಿಕಲಚೇತನ ಮಕ್ಕಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ನೀಡುವ ಮಟ್ಟಕ್ಕೆ ಬೆಳೆದಿದ್ದಾರೆ. ಸಾಮಾಜಿಕ ಸಮಸ್ಯೆಗಳನ್ನು ನೃತ್ಯ ಪ್ರದರ್ಶನ ಕಾರ್ಯಗಾರ ಆಯೋಜಿಸಿ, ಜನರನ್ನು ಜಾಗೃತಗೊಳಿಸುವ ಪ್ರಯತ್ನವನ್ನೂ ಮಾಡುತ್ತಿದ್ದೇವೆ.
ಕೊನೆಯದಾಗಿ ನೃತ್ಯದ ಬಗ್ಗೆ ಏನು ಹೇಳುವುದಕ್ಕೆ ಇಷ್ಟ ಪಡ್ತೀರಾ..?
ನೃತ್ಯ ಕೇವಲ ಒಂದು ಕಲೆ ಅಲ್ಲ. ಮನುಷ್ಯ ಪುರಾತನ ಕಾಲದಿಂದಲೂ ಮೈಗೂಡಿಸಿಕೊಂಡು ಬಂದಿರುವ ಆರೋಗ್ಯಪೂರ್ಣ ಹವ್ಯಾಸ. ನೃತ್ಯ ದೇಹಕ್ಕೆ ಒಳ್ಳೆ ವ್ಯಾಯಾಮ ಕೊಡುತ್ತೆ. ಕೆಲವೊಂದು ಮುದ್ರೆಗಳಿಂದ ಬಿಪಿ, ಶೂಗರ್ ಕಂಟ್ರೋಲ್‌ಗೆ ಬರುತ್ತೆ. ನಗರ ಪ್ರದೇಶಗಳಲ್ಲಿರುವ ಗೃಹಿಣಿಯರು ಏರೋಬಿಕ್ಸ್, ಜಿಮ್ ನಲ್ಲಿ ವರ್ಕ್ಔಟ್ ಮಾಡುವ ಬದಲು ನೃತ್ಯ ಮಾಡುವುದು ಹೆಚ್ಚು ಉತ್ತಮ. ಜಿಮ್ ಒಂದು ಸೀಮಿತ ವಯಸ್ಸಿನ ನಂತರ ಮಾಡುವುದು ಅಷ್ಟು ಒಳ್ಳೆಯದಲ್ಲ. ಆದ್ರೆ, ನೃತ್ಯವನ್ನು ಈಗ ಅಂಬೆಗಾಲು ಇಡುತ್ತಾ ನಡೆದಾಡುವ ಮಗುವಿನಿಂದ ಹಿಡಿದು ಇಳಿ ವಯಸ್ಸಿನ ವೃದ್ಧರವರೆಗೂ ಮಾಡಬಹುದು. ಭರತನಾಟ್ಯದ ಜೊತೆಗೆ ಕುಚುಪುಡಿ, ಒಡಿಸ್ಸಿ, ಕಥಕ್, ಕಥಕ್ಕಳಿ, ಮೋಹಿನಿ ಆಟ್ಟಂ ನೃತ್ಯಗಳಿಗೂ ಕೂಡ ಪ್ರೋತ್ಸಾಹ ನೀಡುತ್ತಿದ್ದಾರೆ. ಪಂಜಾಬಿ, ರಾಜಸ್ಥಾನಿ, ಬಿಹೂ ಸೇರಿದಂತೆ ಬೇರೆ ಬೇರೆ ರಾಜ್ಯಗಳ ನೃತ್ಯ ಪ್ರಕಾರಗಳನ್ನು ಕಲಿಸಿಕೊಡುತ್ತಿದ್ದೇನೆ. ದೇಹ ಮತ್ತು ಮನಸ್ಸಿನ ನೆಮ್ಮದಿಗೆ ನೃತ್ಯ ಅತ್ಯಗತ್ಯ ಅಂತ ಹೇಳುವುದಕ್ಕೆ ಇಷ್ಟಪಡ್ತೀನಿ. ನಿಮ್ಮ ಪ್ರೋತ್ಸಾಹದ ಪ್ರತಿಕ್ರಿಯೆಗಳಿಗಾಗಿ ನಿರೀಕ್ಷಿಸುತ್ತಾ ವಂದನೆಗಳು..,,,,,,!!!!
ಫೋಟೋ ಗ್ಯಾಲರಿ..!!!!







